ಈಗಾಗಲೇ ಸಂಕ್ರಾಂತಿ, ಯುಗಾದಿ ಕ್ರಾಂತಿ ಮುಗಿದಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆ ಫಲಿತಾಂಶ ಬಳಿಕ ಕ್ರಾಂತಿ ಆಗುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಯಾವ ರೀತಿ ಕ್ರಾಂತಿ ನಡೆಯಬಹುದೆಂದು ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.

ಮಾಲೂರು:  ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ನಡೆಯುತ್ತಿರುವಂತೆಯೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಹೊಸ ಬಾಂಬ್ ಹಾಕಿದ್ದಾರೆ.

ಕೋಲಾರದ ಮಾಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ತೆರಳಲು 40 ರಿಂದ50 ಶಾಸಕರ ವಿಮಾನದ ಟಿಕೆಟ್ ಬುಕ್ಕಿಂಗ್ ನಡೆಯುತ್ತಿದೆ. ಮುಖ್ಯಮಂತ್ರಿ ಆಗಬೇಕು ಎಂದು ಪದೇ ಪದೇ ದೆಹಲಿಗೆ ಹೋಗುತ್ತಿದ್ದಾರೆ. ವರ್ಷದಿಂದ ಈ ಪೈಪೋಟಿ ನಡೆಯುತ್ತಿದೆ ಎಂದರು.

ಈಗಾಗಲೇ ಸಂಕ್ರಾಂತಿ, ಯುಗಾದಿ ಕ್ರಾಂತಿ ಮುಗಿದಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆ ಫಲಿತಾಂಶ ಬಳಿಕ ಕ್ರಾಂತಿ ಆಗುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಯಾವ ರೀತಿ ಕ್ರಾಂತಿ ನಡೆಯಬಹುದೆಂದು ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.

ಇನ್ನೂ ಸಚಿವ ಡಿ. ಸುಧಾಕರ್ ಆರೋಗ್ಯ  ಕುರಿತ ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೆಲದುರ್ಬುದ್ಧಿ ಜನರು ಇರುತ್ತಾರೆ. ಅಂಥ ಜನರಿಂದ ಹೆಬ್ಬಟ್ಟಿನ ಘಟನೆ ನಡೆಯುತ್ತವೆ. ದುರ್ಬಳಕೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ತುಸು ಎಚ್ಚರಿಕೆಯಿಂದ ಇರಬೇಕು ಎಂದಷ್ಟೇ ಹೇಳಿದ್ದೆ. ಸುಧಾಕರ್ ವಿಚಾರದಲ್ಲಿ ಹೇಳಿದಲ್ಲ.

ಅವರ ಆರೋಗ್ಯದ ವಾಸ್ತವಾಂಶವನ್ನು ರಾಜ್ಯಸರ್ಕಾರ ಜನರ ಮುಂದಿಡಬೇಕು. ಅವರನ್ನು ನಂಬಿರುವ ಅಭಿಮಾನಿಗಳು, ಕ್ಷೇತ್ರದ ಜನರ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು ಎಂದರು.

#Karnataka #Leadershipchange #Congress #HDKumaraswamy #ಕರ್ನಾಟಕ #ನಾಯಕತ್ವ ಬದಲಾವಣೆ #ಕಾಂಗ್ರೆಸ್ #ಎಚ್ ಡಿ ಕುಮಾರಸ್ವಾಮಿ

Leave a Reply

Your email address will not be published. Required fields are marked *