ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ 250 ಕಿ.ಮೀದೂರದಲ್ಲಿರುವ ಖೈಬರ್ ಪ್ರದೇಶದ ಲಾಂಡಿ ಕೋಟಲ್ ನಲ್ಲಿ ಅಪರಿಚಿತ ಬಂದೂಕುದಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಶೇಖ್ ಯುಸುಫ್ ಅಫ್ರಿದಿ 


ಇಸ್ಲಾಮಾಬಾದ್:  ಮುಂಬೈದಾಳಿಯ ರೂವಾರಿಗಳಲ್ಲಿ ಒಬ್ಬನಾದ ಹಫೀಜ್ ಸಯೀದ್ ಆಪ್ತ ಮತ್ತು ಲಷ್ಕರ್-ಇ- ತೋಯ್ಬಾ ಸಂಘಟನೆ ಮುಖಂಡ ಶೇಖ್ ಯುಸುಫ್ ಅಫ್ರಿದಿ  ಗುಂಡೇಟಿಗೆ ಬಲಿಯಾಗಿದ್ದಾನೆ.

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ 250 ಕಿ.ಮೀ ದೂರದಲ್ಲಿರುವ ಖೈಬರ್ ಪ್ರದೇಶದ ಲಾಂಡಿ ಕೋಟಲ್ ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಪೊಲೀಸರುತಿಳಿಸಿದ್ದಾರೆ.

ಶೇಖ್ ಯೂಸುಫ್ ಅಫ್ರಿದಿ ಬಹಳ ಹಿಂದಿನಿಂದಲೂ ಲಷ್ಕರ್ ನ ಪ್ರಮುಖ ಕಾರ್ಯಕರ್ತ. ಆತ ಖೈಬರ್ ಪಖ್ತುಂಖ್ವಾದಲ್ಲಿ ಮುಜಾಹಿದ್ದೀನ್‌ಗಳಿಗೆ ತರಬೇತಿ ನೀಡಿದನು. ಅಲ್ಲಿಂದ ಅವರನ್ನು ಕಾಶ್ಮೀರ ಮತ್ತು ಇತರ ಸ್ಥಳಗಳಿಗೆ ಕಳುಹಿಸಲಾಯಿತು. 

ಅಫ್ರಿದಿಯನ್ನು ಲಷ್ಕರ್‌ನ ಖೈಬರ್ ಪಖ್ತುಂಖ್ವಾ ಮುಖ್ಯಸ್ಥ ಎಂದು ಪರಿಗಣಿಸಲಾಗಿದೆ. ಆತ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಜೊತೆ ನಿಕಟ ಸಂಬಂಧ ಹೊಂದಿದ್ದಾನೆ. ಹಫೀಜ್ ಸಯೀದ್ ಜೊತೆ ಅಫ್ರಿದಿ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದನು.

Leave a Reply

Your email address will not be published. Required fields are marked *