ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ಇಂದು ಭಾನುವಾರ ನಿಧನರಾದರು. ಅವರ ಆರೋಗ್ಯ ಏಕಾಏಕಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ನಿನ್ನೆ ಸಾಯಂಕಾಲ ದಾಖಲಿಸಲಾಗಿತ್ತು.

ಆಶಾ ಭೋಸ್ಲೆ

ಮುಂಬೈ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ಇಂದು ಭಾನುವಾರ ನಿಧನರಾದರು. ಅವರ ಆರೋಗ್ಯ ಏಕಾಏಕಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ನಿನ್ನೆ ಸಾಯಂಕಾಲ ದಾಖಲಿಸಲಾಗಿತ್ತು.

ಗಾಯಕಿಯ ಮೊಮ್ಮಗಳು ಜನೈ ಭೋಸ್ಲೆ ಈ ಮಾಹಿತಿ ನೀಡಿದ್ದಾರೆ. ಆಶಾ ಭೋಸ್ಲೆ ಅವರಿಗೆ 92 ವರ್ಷವಾಗಿತ್ತು.

ಹಿರಿಯ ಗಾಯಕಿ ಬಹು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಅಂಗಾಂಗ ವೈಫಲ್ಯದಿಂದಾಗಿ ನಿಧನರಾದರು ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆ ವೈದ್ಯರಾದ ಪ್ರತೀತ್ ಸಮದಾನಿ ದೃಢಪಡಿಸಿದರು.

‘ಆಶಾ ಭೋಸ್ಲೆ ಇಂದು ನಿಧನರಾದರು ಎಂಬುದು ದುಃಖಕರ ಸುದ್ದಿ. ಅವರು ಬಹು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು ಎಂದು ಅವರು ಹೇಳಿದರು.

ಅವರ ನಿಧನದ ಸುದ್ದಿಯನ್ನು ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಆಶಿಶ್ ಶೇಲಾರ್ ಅವರು ಆಸ್ಪತ್ರೆಯ ಹೊರಗೆ ಪ್ರಕಟಿಸಿದರು. ಸೋಮವಾರ ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

Leave a Reply

Your email address will not be published. Required fields are marked *