ತಳವಾರ ಸಮುದಾಯದವರಿಗೆ ST ಜಾತಿ ಪ್ರಮಾಣ ಪತ್ರ ವಿತರಣೆಯಲ್ಲಿ ಇರುವ ಸಮಸ್ಯೆ ಕುರಿತು ನಾಲ್ಕು ಸಭೆಗಳನ್ನು ನಡೆಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ST ಪ್ರಮಾಣ ಪತ್ರ ವಿತರಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಕಲಬುರಗಿ: ಸರ್ಕಾರದಿಂದ ಅರ್ಹರಿಗೆ ST ಜಾತಿ ಪ್ರಮಾಣ ಪತ್ರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಕೆಲವು ಸಂಘ-ಸಂಸ್ಥೆಗಳು, ಹೋರಾಟಗಾರರು ವಾಸ್ತವಿಕ ಸತ್ಯ ಅರಿಯದೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿರುವುದು ರಾಜಕೀಯ ಪ್ರೇರಿತ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ತಳವಾರ ಸಮುದಾಯದವರಿಗೆ ST ಜಾತಿ ಪ್ರಮಾಣ ಪತ್ರ ವಿತರಣೆಯಲ್ಲಿ ಇರುವ ಸಮಸ್ಯೆ ಕುರಿತು ನಾಲ್ಕು ಸಭೆಗಳನ್ನು ನಡೆಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ST ಪ್ರಮಾಣ ಪತ್ರ ವಿತರಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಮುಖ್ಯಮಂತ್ರಿಗಳ ಸಭೆ ನಂತರವೂ ಹೋರಾಟ ಮಾಡುವ ಮುಂಚೂಣಿಯಲ್ಲಿರುವ ನಾಯಕರಿಗೆ ಹಾಗೂ ಸಮಾಜದ ಮುಖಂಡರಿಗೆ ಇಲಾಖೆಯ ಕಾರ್ಯದರ್ಶಿಗಳಿಗೆ 2-3 ಬಾರಿ ಭೇಟಿ ಮಾಡಿಸಿ, ಸಮಾಲೋಚಿಸಿ, ಸಲಹೆ ನೀಡಿದ ನಂತರವೇ ಸರ್ಕಾರಿ ಆದೇಶವನ್ನು ಹೊರಡಿಸಲಾಯಿತು ಎಂದು ಸ್ಪಷ್ಪಪಡಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆಲವರು ಸುಳ್ಳು, ಜಾತಿ ಪ್ರಮಾಣ ಪತ್ರ ಪಡೆಯಲು ಪಯತ್ನಿಸುತ್ತಿದ್ದು, ಇದರಿಂದ ನಿಜವಾದ ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ಅನ್ಯಾಯವಾಗುತ್ತಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುತ್ತಾರೆ. ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಕೆಯಾಗುವ ಪ್ರತಿಯೊಂದು ಅರ್ಜಿಯನ್ನು ತಹಸೀಲ್ದಾರರ ಹಂತದಲ್ಲಿ ನಿಯಮಾವಳಿಗಳ ಪ್ರಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೆ ಸ್ಪಷ್ಟವಾದ ಸೂಚನೆ ನೀಡಲಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ. #Karnataka #Talawaracommunity #stcasteCertificate #Priyankkharge #ಪ್ರಿಯಾಂಕ್ ಖರ್ಗೆ #ತಳವಾರ ಸಮುದಾಯ #ಪರಿಶಿಷ್ಟಪಂಗಡ ಜಾತಿಪ್ರಮಾಣ ಪತ್ರ #ಪ್ರಿಯಾಂಕ್ ಖರ್ಗೆ Share via: Facebook X (Twitter) LinkedIn More Post navigation ಡಾ. ರಾಜ್ ಕುಮಾರ್ ಸ್ಮಾರಕ ಬಗ್ಗೆ ಮಾತನಾಡಲು ಚೇತನ್ ಯೋಗ್ಯರಲ್ಲ- ನಿಖಿಲ್ ಕುಮಾರಸ್ವಾಮಿ! ಪ್ರಜಾಪ್ರಭುತ್ವದಲ್ಲಿ ಯಾರು ಮಾತನಾಡಲು ಯೋಗ್ಯ? ನಿಖಿಲ್ ಗೆ ಚೇತನ್ ಪ್ರಶ್ನೆ!