ಇರಾನ್ ಪ್ರಸ್ತಾವನೆ ಕುರಿತು ಮಾತನಾಡಿರುವ ಟ್ರಂಪ್, ಇರಾನ್ ಒಪ್ಪಿಕೊಳ್ಳಲಾಗದ ಕೆಲವು ಬೇಡಿಕೆಗಳನ್ನು ಇಟ್ಟಿದೆ. ನನಗೆ ಈ ಪ್ರಸ್ತಾವನೆಯ ಬಗ್ಗೆ ಸಮಾಧಾನವಿಲ್ಲ ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್: ಇರಾನ್ ತನ್ನ ಹೊಸ ಶಾಂತಿ ಪ್ರಸ್ತಾವನೆಯನ್ನು ಪಾಕಿಸ್ತಾನದ ಮಧ್ಯಸ್ಥಿಕೆಯ ಮೂಲಕ ಅಮೆರಿಕಕ್ಕೆ ಕಳುಹಿಸಿದೆ. ಆದರೆ, ಪ್ರಸ್ತಾವನೆಯಲ್ಲಿ ಇರಾನ್ ಮುಂದಿಟ್ಟಿರುವ ಬೇಡಿಕೆಗಳು ಅಮೆರಿಕಾದ ಕಣ್ಣು ಕೆಂಪಾಗಿಸಿದೆ. ಇರಾನ್ ಪ್ರಸ್ತಾವನೆ ಕುರಿತು ಮಾತನಾಡಿರುವ ಟ್ರಂಪ್, ಇರಾನ್ ಒಪ್ಪಿಕೊಳ್ಳಲಾಗದ ಕೆಲವು ಬೇಡಿಕೆಗಳನ್ನು ಇಟ್ಟಿದೆ. ನನಗೆ ಈ ಪ್ರಸ್ತಾವನೆಯ ಬಗ್ಗೆ ಸಮಾಧಾನವಿಲ್ಲ ಎಂದು ಹೇಳಿದ್ದಾರೆ. ಇರಾನ್ ತನ್ನ ಪ್ರಸ್ತಾವನೆಯಲ್ಲಿ ಅಮೆರಿಕ ಕೂಡಲೇ ಇರಾನ್ ಮೇಲಿನ ಎಲ್ಲಾ ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸಬೇಕು ಮತ್ತು ಇರಾನ್ ಬಂದರುಗಳ ಮೇಲಿನ ನೌಕಾಪಡೆಯ ದಿಗ್ಬಂಧನವನ್ನೂ ಹಿಂಪಡೆಯಬೇಕು ಎಂಬ ಷರತ್ತುಗಳನ್ನು ವಿಧಿಸಿದೆ. ಇದನ್ನು ಟ್ರಂಪ್ “ಅತಿಯಾದ ಬೇಡಿಕೆ”. ಇರಾನ್ ಶಾಂತಿ ವಿಚಾರದಲ್ಲಿ ಗಂಭೀರವಾಗಿಲ್ಲ ಮತ್ತು ಕೇವಲ ಸಮಯ ವ್ಯರ್ಥ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದೀಗ ಎರಡು ದೇಶಗಳ ನಡುವೆ ಮೂರು ವಾರಗಳಿಂದ ಕದನ ವಿರಾಮ ಮುಂದುವರೆದಿದ್ದರೂ ಉಭಯ ದೇಶಗಳ ನಡುವೆ ಪರಸ್ಪರ ನಿಯಮ ಉಲ್ಲಂಘನೆ ಆರೋಪ ಕೇಳಿಬರುತ್ತಿದೆ. #iranwar #DonaldTrump #unhappy #Tehran offer # ಇರಾನ್ ವಾರ್ #ಡೊನಾಲ್ಡ್ ಟ್ರಂಪ್ #ಅಸಮಾಧಾನ #ಇರಾನ್ ಆಫರ್ Share via: Facebook X (Twitter) LinkedIn More Post navigation ಸಿಎಂ ಬದಲಾವಣೆ ಚರ್ಚೆ ನಡುವೆ ಕುತೂಹಲ ಕೆರಳಿಸಿದ ಸಿಎಂ ಸಿದ್ದರಾಮಯ್ಯ-ಬಿ.ಕೆ ಹರಿಪ್ರಸಾದ್ ಮಾತುಕತೆ! ಮಿತ್ರ ಪಕ್ಷಗಳನ್ನು ಬಳಸಿಕೊಂಡು ಎಸೆಯುವುದು ಕಾಂಗ್ರೆಸ್ ಚಾಳಿ- ಬಿಜೆಪಿ ತೀವ್ರ ವಾಗ್ದಾಳಿ!