ಮೋಡ ಕವಿದ ವಾತಾವರಣದಲ್ಲಿ ಸಿಂಪಲ್ ಸುನಿ ತಮ್ಮ ಶಿಷ್ಯನಿಗಾಗಿ ಆಕ್ಷನ್ ಕಟ್ ಹೇಳಿದ್ದಾರೆ. ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ಈ ಸಿನಿಮಾ ನಾಯಕ. ಸಿಂಪಲ್ ಸುನಿ ಸಾರಥ್ಯದಲ್ಲಿ ಮೂಡಿಬಂದಿರುವ ಮೋಡ ಕವಿದ ವಾತಾವರಣ ಸಿನಿಮಾ ಟೈಟಲ್ ಹಾಗೂ ಕಂಟೆಂಟ್ ನಿಂದಾಗಿ ಗಾಂಧಿನಗರದಲ್ಲಿ ನಿರೀಕ್ಷೆ ಹೆಚ್ಚು ಮಾಡಿದೆ. ಜೂನ್ 26 ರಂದು ಈ ಚಿತ್ರ ತೆರೆಗೆ ಬರ್ತಿದೆ. ಇದೀಗ ಸಿನಿಮಾ ಸೆನ್ಸಾರ್ ಅಸ್ತು ಎಂದಿದ್ದು, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಮೋಡ ಕವಿದ ವಾತಾವರಣದಲ್ಲಿ ಸಿಂಪಲ್ ಸುನಿ ತಮ್ಮ ಶಿಷ್ಯನಿಗಾಗಿ ಆಕ್ಷನ್ ಕಟ್ ಹೇಳಿದ್ದಾರೆ. ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ ಈ ಸಿನಿಮಾ ನಾಯಕ. ಶೀಲಮ್ ಅವರು ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗʼಮೋಡ ಕವಿದ ವಾತಾವರಣʼದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಹದಿಹರೆಯದ gen -G ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷ ಕುಶಾಲ್ ನಟಿಸಿದ್ದಾರೆ. ಸಿನಿಮಾಗೆ ಸಂತೋಷ್ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದೆ. #Sandalwood #ModaKavidaVatavarana #Release #simplesunni #ಸ್ಯಾಂಡಲ್ ವುಡ್ #ಮೋಡ ಕವಿದ ವಾತಾವರಣ# ಬಿಡುಗಡೆ Post navigation ರಾಮ್ ಚರಣ್ ‘ಪೆದ್ದಿ’ಯಲ್ಲಿ ಗೌರ್ನಾಯ್ಡು ಗತ್ತಿನಲ್ಲಿ ಶಿವಣ್ಣ ಅಬ್ಬರ!