ಸಿಎಂ ಡಿಕೆ ಶಿವಕುಮಾರ್


ವ್ಯಕ್ತಿಯೊಬ್ಬರ ಲಂಚದ ಸಮಸ್ಯೆ ಕೇಳಿದ ಮುಖ್ಯಮಂತ್ರಿ, ಏಯ್ ಅವನ್ಯಾವೋ 50000 ಲಂಚ ಕೇಳ್ತಿದ್ದಾನಂತೆ.ಸಂಜೆ ಒಳಗೆ ಬಲಿ ಹಾಕ್ಬೇಕು ಅವನನ್ನ ಸಸ್ಪೆಂಡ್ ಮಾಡಬೇಕು ಅಂತಾ ಹೇಳಿದ್ದಾರೆ. 

ಬೆಂಗಳೂರು: ಹಿರಿಯೂರಿನಲ್ಲಿ ನಡೆದ ಪ್ರಜಾ ಸೇವೆ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳನ್ನು  ಕುರಿತು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವ್ಯಕ್ತಿಯೊಬ್ಬರ ಲಂಚದ ಸಮಸ್ಯೆ ಕೇಳಿದ ಮುಖ್ಯಮಂತ್ರಿ, ಏಯ್ ಅವನ್ಯಾವೋ 50000 ಲಂಚ ಕೇಳ್ತಿದ್ದಾನಂತೆ.ಸಂಜೆ ಒಳಗೆ ಬಲಿ ಹಾಕ್ಬೇಕು ಅವನನ್ನ ಸಸ್ಪೆಂಡ್ ಮಾಡಬೇಕು ಅಂತಾ ಹೇಳಿದ್ದಾರೆ. 

ಜನರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಮುಖ್ಯಮಂತ್ರಿ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಜಾ ಸೇವೆ ಅನ್ನೋದು ಇದೇನಾ? ಏಯ್, ಹೋಗೋ, ಬಾರೋ ಪ್ರಜೆಗಳನ್ನು ಕುರಿಗಳಂತೆ ಕಾಣೋ ಪದ್ಧತಿ ಬಿಡಿ ಮುಖ್ಯಮಂತ್ರಿಗಳೇ ಅಂತಾ ತಾಕೀತು ಮಾಡಿದ್ದಾರೆ. 

ಯಾವ ಘನ ಕಾರ್ಯಕ್ಕೆ ಈ ಕಾರ್ಯಕ್ರಮ? ಈ ಕಾರ್ಯಕ್ರಮದಿಂದ ಅದೆಷ್ಟು ಭ್ರಷ್ಟಾಚಾರ ನಿಂತಿದೆ. ನಿಮ್ಮದೇ ಸಚಿವರು ಗೌರವಯುತವಾಗಿ ಕೊಡ್ರಿ ಅಂತ ಹೇಳಿರೋವಾಗ ಬದಲಾವಣೆ ನಿಮ್ಮಿಂದ ಸಾಧ್ಯವೇ ಎಂದು ಚೇತನ್ ಸೂರ್ಯ ಎಂಬುವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link