ರವಿ ಹಂಜ್ ಭಾರತದಲ್ಲೇ ಇರುವುದನ್ನು ಪತ್ತೆಹಚ್ಚಲಾಗಿದ್ದು, ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಅವರಿಗೆ ಅಧಿಕೃತವಾಗಿ ನೋಟಿಸ್ ನೀಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬೆಂಗಳೂರು: 12ನೇ ಶತಮಾನದ ಸಮಾಜ ಸುಧಾರಕ ‘ಬಸವಣ್ಣ ಹಾಗೂ ಅವರ ವಚನಗಳನ್ನು ಅವಮಾನಿಸಿದ ಅನಿವಾಸಿ ಭಾರತೀಯ, ದಾವಣಗೆರೆ ಮೂಲದ ರವಿ ಹಂಜ್, ತಾನು ಅಮೆರಿಕದಲ್ಲಿದ್ದೇನೆ ಎಂದು ಬಿಂಬಿಸಲು ಯತ್ನಿಸಿದ್ದರು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ ಹೇಳಿದ್ದಾರೆ. ರವಿ ಹಂಜ್ ಅವರು ತಮ್ಮ ‘ಬಸವ ಮಂಟಪ’ ಎಂಬ ಪುಸ್ತಕದ ಮೂಲಕ, ಗುರು ಬಸವಣ್ಣನವರ ಇತಿಹಾಸವನ್ನು ತಿರುಚಿದ್ದಾರೆ ಮತ್ತು ಕನ್ನಡಿಗರ ಭಾವನೆಗಳಿಗೆ ತೀವ್ರ ನೋವುಂಟುಮಾಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆರಂಭದಲ್ಲಿ, ತಾವು ಭಾರತವನ್ನು ತೊರೆದು ಅಮೆರಿಕಕ್ಕೆ ಹೋಗಿರುವುದಾಗಿ ಬಿಂಬಿಸಲು ರವಿ ಹಂಜ್ ಪ್ರಯತ್ನಿಸಿದ್ದರು. ಆದರೆ, ಗೃಹ ಇಲಾಖೆಯು ಪರಿಶೀಲನೆ ನಡೆಸಿದಾಗ, ಅವರು ನೆರೆಯ ರಾಜ್ಯವೊಂದರಲ್ಲಿರುವುದು ದೃಢಪಟ್ಟಿತು ಎಂದು ಗೃಹ ಸಚಿವರು ತಿಳಿಸಿದ್ದಾರೆ. Ravi Hanj, through his book Basava Mantapa, stands accused of distorting the history of Guru Basavanna and deeply hurting the sentiments of Kannadigas.He initially attempted to create the impression that he had left India for the United States. However, verification by the Home…— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 21, 2026 ರವಿ ಹಂಜ್ ಭಾರತದಲ್ಲೇ ಇರುವುದನ್ನು ಪತ್ತೆಹಚ್ಚಲಾಗಿದ್ದು, ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಅವರಿಗೆ ಅಧಿಕೃತವಾಗಿ ನೋಟಿಸ್ ನೀಡಲಾಗಿದೆ. ರವಿ ಹಂಜ್ ಅಮೆರಿಕದ ಪ್ರಜೆಯಾಗಿರುವುದರಿಂದ, ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ಬಗ್ಗೆ ಮತ್ತು ತನಿಖೆಯ ಅಂಗವಾಗಿ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯದ ಕುರಿತು ನಾವು ಅಮೆರಿಕದ ರಾಯಭಾರ ಕಚೇರಿಗೂ ಅಧಿಕೃತವಾಗಿ ಮಾಹಿತಿ ನೀಡಿದ್ದೇವೆ ಎಂದು ಖರ್ಗೆ ತಿಳಿಸಿದ್ದಾರೆ. ಅವರು ವಿದೇಶಿ ಪೌರತ್ವ ಹೊಂದಿದ್ದರೂ ಭಾರತೀಯ ಕಾನೂನಿಗಿಂತ ದೊಡ್ಡವರಲ್ಲ. ಅಲ್ಲದೆ, ವಿದೇಶಿ ಪೌರತ್ವವು ತನಿಖೆಯಿಂದ ಅಥವಾ ಹೊಣೆಗಾರಿಕೆಯಿಂದ ವಿನಾಯಿತಿಯನ್ನೂ ನೀಡುವುದಿಲ್ಲ ಎಂದಿದ್ದಾರೆ. ಗುರು ಬಸವಣ್ಣನವರ ಪರಂಪರೆಯು ಕರ್ನಾಟಕದ ಇತಿಹಾಸ, ಅಸ್ಮಿತೆ ಮತ್ತು ಸಾಮಾಜಿಕ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ #Basava Mantapa book #Ravi Hanj #Arrested #Priyank kharge #ಬಸವಮಂಟಪ ಪುಸ್ತಕ #ರವಿಹಂಜ್ #ಬಂಧನ#ಪ್ರಿಯಾಂಕ್ ಖರ್ಗೆ Share via: Facebook X (Twitter) LinkedIn More Post navigation ಬೆಂಗಳೂರು: ₹15,000 ಮಾಸಿಕ ಗೌರವ ಧನಕ್ಕೆ ಆಗ್ರಹ: ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭ! ಪ್ರಜಾ ಸೇವೆ ಅನ್ನೋದು ಇದೇನಾ..? ಕುರಿಗಳಂತೆ ಕಾಣೋ ಪದ್ಧತಿ ಬಿಡಿ ಮುಖ್ಯಮಂತ್ರಿಗಳೇ..! ಜನತೆಯ ಪಾಠ