ನಿತೀಶ್ ಕುಮಾರ್


ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನಿತೀಶ್ ಕುಮಾರ್ ಅವರ ದೀರ್ಘ ಆಡಳಿತಾತ್ಮಕ ಅನುಭವವು ಅವರನ್ನು ದೇಶದ ಎರಡನೇ ಅತ್ಯುನ್ನತ ಕಾರ್ಯಕಾರಿ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನಾಗಿ ಮಾಡುತ್ತದೆ ಎಂದು ಜೆಡಿಯು ಶಾಸಕ ಪಂಕಜ್ ಮಿಶ್ರಾ ಹೇಳಿದ್ದಾರೆ.

ನಿತೀಶ್ ಕುಮಾರ್

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉಪ ಪ್ರಧಾನಿಯಾಗಿ ನೇಮಿಸಬೇಕೆಂಬ ಬೇಡಿಕೆಗಳು ಜೋರಾಗಿ ಕೇಳಿಬರುತ್ತಿವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ  ಎದ್ದಿರುವ ಊಹಾಪೋಹಗಳ ನಡುವೆ  ಈಗ ಜೆಡಿಯು, ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಜೊತೆ ಸೇರಿ ಈ ಪ್ರಸ್ತಾವನೆಯನ್ನು ಬೆಂಬಲಿಸುತ್ತಿದೆ.

ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನಿತೀಶ್ ಕುಮಾರ್ ಅವರ ದೀರ್ಘ ಆಡಳಿತಾತ್ಮಕ ಅನುಭವವು ಅವರನ್ನು ದೇಶದ ಎರಡನೇ ಅತ್ಯುನ್ನತ ಕಾರ್ಯಕಾರಿ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನಾಗಿ ಮಾಡುತ್ತದೆ ಎಂದು ಜೆಡಿಯು ಶಾಸಕ ಪಂಕಜ್ ಮಿಶ್ರಾ ಹೇಳಿದ್ದಾರೆ.

ನಿತೀಶ್ ಕುಮಾರ್ ಅವರನ್ನು ಉಪ ಪ್ರಧಾನಿಯಾಗಿ ನೇಮಿಸಬೇಕು. ಬಿಹಾರದ ಜನರು ಸಹ ಇದನ್ನು ಬೆಂಬಲಿಸುತ್ತಾರೆ ಎಂದು ಅವರು ಪ್ರತಿಪಾದಿಸಿದ್ದಾರೆ. ನಿತೀಶ್ ಕುಮಾರ್ ಸುಮಾರು ಎರಡು ದಶಕಗಳ ಕಾಲ ಬಿಹಾರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯವನ್ನು ಮುನ್ನಡೆಸುವ ಮೊದಲು ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

“ಮೋದಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ನಾನು ಕೇಳಿದ್ದೇನೆ. ನಿತೀಶ್ ಕುಮಾರ್ ಈಗಾಗಲೇ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಆದ್ದರಿಂದ ಅವರನ್ನು ಉಪ ಪ್ರಧಾನಿಯನ್ನಾಗಿ ಮಾಡಬೇಕು. ಅದು ಸೂಕ್ತ ಗೌರವವಾಗಿರುತ್ತದೆ” ಎಂದು ಜೆಡಿ(ಯು) ಶಾಸಕರು ಹೇಳಿದರು.

 ರಾಷ್ಟ್ರೀಯ ರಾಜಕೀಯದಲ್ಲಿ ನಿತೀಶ್ ಕುಮಾರ್ ಅವರಿಗೆ ಮಹತ್ವದ ಪಾತ್ರವನ್ನು ವಹಿಸಬೇಕೆಂದು ಹಿರಿಯ ಆರ್ ಜೆಡಿ ನಾಯಕ ಮುಖೇಶ್ ರೋಷನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಇದೀಗ ಜೆಡಿಯು ಕೂಡಾ ಇದೇ ರೀತಿಯ ಬೇಡಿಕೆ ಮುಂದಿಟ್ಟಿದೆ. ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಏಪ್ರಿಲ್ 10 ರಂದು ಮೇಲ್ಮನೆಗೆ ಆಯ್ಕೆಯಾದ ನಂತರ ಏಪ್ರಿಲ್ 14, 2026 ರಂದು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಏಪ್ರಿಲ್ 15 ರಂದು ಬಿಹಾರ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕರಿಸಿದ್ದರು.

#NitishKumar #Deputypm #RJD #JDU #ನಿತೀಶ್ ಕುಮಾರ್ #ಉಪಪ್ರಧಾನಿ #ಆರ್ ಜೆಡಿ#ಜೆಡಿಯು

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link