ರಾಜಘಾಟ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಗಾಂಧೀಜಿಯವರ ಸಮಾಧಿಯಲ್ಲಿ ನಡೆದ ಸರ್ವಧರ್ಮ ಪ್ರಾರ್ಥನೆಯಲ್ಲಿ ಭಾಗವಹಿಸಿ ನಮನ ಸಲ್ಲಿಸಿದರು. ನವದೆಹಲಿ: ಮಹಾತ್ಮ ಗಾಂಧೀಜಿ ಅವರ 157ನೇ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಶುಕ್ರವಾರ ನವದೆಹಲಿಯ ರಾಜಘಾಟ್‌ಗೆ ತೆರಳಿ ಗೌರವ ನಮನ ಸಲ್ಲಿಸಿದರು. ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಶಾಂತಿ, ಅಹಿಂಸೆ ಹಾಗೂ ಸ್ವಚ್ಛತೆಯ ಕುರಿತಾದ ಗಾಂಧೀಜಿಯವರ ಸಂದೇಶವನ್ನು ಸ್ಮರಿಸಲಾಗುತ್ತಿದೆ. ರಾಜಘಾಟ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಗಾಂಧೀಜಿಯವರ ಸಮಾಧಿಯಲ್ಲಿ ನಡೆದ ಸರ್ವಧರ್ಮ ಪ್ರಾರ್ಥನೆಯಲ್ಲಿ ಭಾಗವಹಿಸಿ ನಮನ ಸಲ್ಲಿಸಿದರು. May Bapu’s timeless message keep guiding us towards a better society and a Viksit Bharat. #GandhiJayanti pic.twitter.com/nEISzsM37X— Narendra Modi (@narendramodi) October 2, 2026 ಇದೇ ವೇಳೆ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ದೆಹಲಿಯ ವಿಜಯ್ ಘಾಟ್‌ಗೆ ತೆರಳಿ ಗೌರವ ಸಲ್ಲಿಸಿದರು. #newdelhi #rajghat #PM Modi pays tribute #Mahatma Gandhi #ನವದೆಹಲಿ#ರಾಜ್ ಘಾಟ#ಪ್ರಧಾನಿ ಮೋದಿ ಗೌರವನಮನ #ಮಹಾತ್ಮ ಗಾಂಧೀಜಿ Share via: Facebook X (Twitter) LinkedIn More Post navigation ಕಾವೇರಿ ಜಲವಿವಾದ: ಕರ್ನಾಟಕಕ್ಕೆ ಸುಪ್ರೀಂ ಶಾಕ್; CWMA ಆದೇಶ ಪಾಲಿಸುವಂತೆ ಸೂಚನೆ! ದೆಹಲಿ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸರ ವಶಕ್ಕೆ!