ಟ್ರೇಲರ್ ಆರಂಭದಲ್ಲೇ ಯಶ್ ರಾವಣ ಲಂಕೆಯ ರಾಜನಾಗಿ ಅಧಿಕಾರ ವಹಿಸಿಕೊಳ್ಳುವ ದೃಶ್ಯವಿದೆ. ಬಳಿಕ ಅಯೋಧ್ಯೆಯಲ್ಲಿನ ಶ್ರೀರಾಮನ ಜೀವನದಿಂದ ಆರಂಭವಾಗುವ ರಾಮಾಯಣದ ಕಥೆಯನ್ನು ಪ್ರಮುಖ ಘಟ್ಟಗಳ ಮೂಲಕ ಪರಿಚಯಿಸಲಾಗುತ್ತದೆ. ನಿತೇಶ್ ತಿವಾರಿ ನಿರ್ದೇಶನದ ರಾಕಿಂಗ್ ಸ್ಟಾರ್, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಭಿನಯದ ಬಹು ನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಚಿತ್ರದ ಟ್ರೇಲರ್ ಇಂದು ನಸುಕಿನ ಜಾವ 4:15ಕ್ಕೆ ಬಿಡುಗಡೆಯಾಗಿದೆ. ಹಿಂದೂ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ ಆಧಾರಿತ ಈ ಚಿತ್ರದ ಟ್ರೇಲರ್ ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿ ಅನಾವರಣಗೊಂಡಿದೆ. ಟ್ರೇಲರ್ ಆರಂಭದಲ್ಲೇ ಯಶ್ ರಾವಣ ಲಂಕೆಯ ರಾಜನಾಗಿ ಅಧಿಕಾರ ವಹಿಸಿಕೊಳ್ಳುವ ದೃಶ್ಯವಿದೆ. ಬಳಿಕ ಅಯೋಧ್ಯೆಯಲ್ಲಿನ ಶ್ರೀರಾಮನ ಜೀವನದಿಂದ ಆರಂಭವಾಗುವ ರಾಮಾಯಣದ ಕಥೆಯನ್ನು ಪ್ರಮುಖ ಘಟ್ಟಗಳ ಮೂಲಕ ಪರಿಚಯಿಸಲಾಗುತ್ತದೆ.ರಾವಣನಿಂದ ಲೋಕದಲ್ಲಿ ಅರಾಜಕತೆ ಮತ್ತು ವಿನಾಶ ಉಂಟಾಗುತ್ತಿದ್ದಂತೆ, ಭೂಮಿಯಲ್ಲಿ ಧರ್ಮಸ್ಥಾಪನೆ ಹಾಗೂ ಸಮತೋಲನ ಕಾಪಾಡಲು ಭಗವಾನ್ ವಿಷ್ಣು ಶ್ರೀರಾಮನ ಅವತಾರ ತಾಳುತ್ತಾರೆ. The biggest goosebumps moment in the #RamayanaTrailer? #Yash as #Ravana. 🔥The intensity in his eyes, the commanding aura and the sheer dominance on screen make for an unforgettable first impression.pic.twitter.com/dHx46wyXcF— Ramesh Bala (@rameshlaus) July 30, 2026 ನಂತರ ರಣಬೀರ್ ಕಪೂರ್ ಅಭಿನಯದ ಶ್ರೀರಾಮನ ಪಾತ್ರದ ಪರಿಚಯವಾಗುತ್ತದೆ. ರಾಕ್ಷಸರ ವಿರುದ್ಧ ಹೋರಾಡಿ ತನ್ನ ಪ್ರಜೆಯನ್ನು ರಕ್ಷಿಸುವ ರಾಮನ ಬಾಲ್ಯದಿಂದ ಯುವಕನಾಗುವ ಪಯಣ ಹಾಗೂ ಬಳಿಕ ಸೀತೆಯೊಂದಿಗೆ ವಿವಾಹವಾಗುವ ದೃಶ್ಯಗಳನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ರಾಮನಿಗೆ 14 ವರ್ಷಗಳ ವನವಾಸ ವಿಧಿಸಲಾಗುತ್ತದೆ. ಸಾಯಿ ಪಲ್ಲವಿ ಅಭಿನಯದ ಸೀತೆ ಹಾಗೂ ರವಿ ದುಬೆ ಅಭಿನಯದ ಲಕ್ಷ್ಮಣ ಕೂಡ ರಾಮನೊಂದಿಗೆ ವನವಾಸಕ್ಕೆ ತೆರಳಲು ನಿರ್ಧರಿಸುತ್ತಾರೆ. ಮುಂದೆ ರಾವಣನು ಸೀತೆಯನ್ನು ಅಪಹರಿಸುವುದು, ಆ ಬಳಿಕ ನಡೆಯುವ ರಾಮ–ರಾವಣರ ನಡುವಿನ ಮಹಾಯುದ್ಧ ಹಾಗೂ ಧರ್ಮ ಮತ್ತು ಅಧರ್ಮದ ನಡುವಿನ ಅತ್ಯಂತ ಮಹತ್ವದ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುವ ದೃಶ್ಯಗಳೊಂದಿಗೆ ಟ್ರೇಲರ್ ಅಂತ್ಯಗೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅಭಿನಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉಳಿದಂತೆ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ನಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. #Ramayana trailer #trailer #Yash #Ravana #ರಾಮಾಯಣ#ಟ್ರೇಲರ್ #ಯಶ್ #ರಾವಣ Share via: Facebook X (Twitter) LinkedIn More Post navigation ಪ್ರಜ್ವಲ್ ದೇವರಾಜ್ ಅನಗತ್ಯವಾಗಿ ಕಿರಿಕ್ ಮಾಡಿಲ್ಲ: ನಟಿ ಮೇಘನಾ ರಾಜ್! ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಶಾಂತಿಕ್ರಾಂತಿ’ ರಿ ರಿಲೀಸ್ ಗೆ ಅಭಿಯಾನ ಶುರು!