ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿ ಶೆಟ್, ಗುನುಗುಟ್ಟವ ಇಂಪಾದ, ಸೊಗಸಾದ ನಾದಬ್ರಹ್ಮ ಹಂಸಲೇಖ ಅವರ ಗೀತೆಗಳು, ಬ್ಯಾಕ್ ಗ್ರೌಡ್ ಮ್ಯೂಸಿಕ್ ಎಲ್ಲವೂ ಚೆನ್ನಾಗಿತ್ತು. ‘ಶಾಂತಿಕ್ರಾಂತಿ’ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಇವತ್ತು ಏನು ಪ್ಯಾನ್ ಇಂಡಿಯಾ ಎಂಬ ಕೆನ್ಶೆಪ್ಟ್ ಇದೆಯೋ ಅದನ್ನು ಸುಮಾರು 30 ವರ್ಷಗಳ ಹಿಂದೆಯ ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್ ಅವತ್ತಿಗೆ ಮಾಡಿ ತೋರಿಸಿದ್ದರು. ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿ ಶೆಟ್, ಗುನುಗುಟ್ಟವ ಇಂಪಾದ, ಸೊಗಸಾದ ನಾದಬ್ರಹ್ಮ ಹಂಸಲೇಖ ಅವರ ಗೀತೆಗಳು, ಬ್ಯಾಕ್ ಗ್ರೌಡ್ ಮ್ಯೂಸಿಕ್ ಎಲ್ಲವೂ ಚೆನ್ನಾಗಿತ್ತು. ತಮಿಳಿನಲ್ಲಿ ರಜನಿಕಾಂತ್, ತೆಲುಗಿನಲ್ಲಿ ನಾಗಾರ್ಜುನ ಹಾಗೂ ಕನ್ನಡದಲ್ಲಿ ರವಿಚಂದ್ರನ್ ಹಾಗೂ ಜೂಹ್ಲಿ ಚಾವ್ಲಾ ಜೋಡಿಯಾಗಿ ನಟಿಸಿದ ಈ ಸಿನಿಮಾ ನಟಿಸಿದ ಈ ಸಿನಿಮಾ ಸೆಪ್ಟೆಂಬರ್ 19, 1990ರಲ್ಲಿ ಬಿಡುಗಡೆಯಾಗಿತ್ತು. ಆದರೆ ಎಲ್ಲವೂ ಚೆನ್ನಾಗಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇದು ಕನ್ನಡ ಚಿತ್ರರಂಗಕ್ಕೆ ಸೋಲಾಗಿತ್ತು. ಈ ಚಿತ್ರ ಅವತ್ತು ಏನಾದ್ರೂ ಗೆದ್ದಿದ್ದರೆ ಕೆಜಿಎಫ್ ನಿಂದ ಇತ್ತೀಚಿಗೆ ಶುರುವಾದ ಅಲೆ ಆಗಲೇ ಶುರುವಾಗಬೇಕಿತ್ತು. ಅದ್ದೂರಿತನ, ಮನಸೆಳೆಯುವ ಸೆಟ್, ಇವತ್ತಿಗೂ ಕೇಳಬಯಸುವ ಹಾಡುಗಳು ಜನರನ್ನು ಆಕರ್ಷಿಸಿತ್ತು. ಆದರೆ ಚಿತ್ರದ ಸೋಲು ಕನ್ನಡ ಚಿತ್ರರಂಗ ಹಾಗೂ ರವಿಚಂದ್ರನ್ ಅವರಿಗೆ ಸಾಕಷ್ಟು ನಷ್ಟವನ್ನುಂಟು ಮಾಡಿತ್ತು. ಆ ಸಿನಿಮಾ ಸೋಲಿನಿಂದ ಎದ್ದೇಳಲು ರವಿಚಂದ್ರನ್ ಸಾಕಷ್ಟು ವರ್ಷ ಬೇಕಾಯಿತು. ಈಗ ಮತ್ತೆ ಅದೇ ಸೋಲಿನಲ್ಲಿರುವ ರವಿಚಂದ್ರನ್ ಅವರಿಗೆ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ʻಶಾಂತಿ ಕ್ರಾಂತಿʼಯನ್ನು ಮರು ಬಿಡುಗಡೆ ಮಾಡಬೇಕು ಎಂದು ಅವರ ಅಭಿಮಾನಿಗಳು ಅಭಿಯಾನ ನಡೆಸುತ್ತಿದ್ದಾರೆ. ಅಭಿಮಾನಿಗಳ ಈ ಆಸೆ ಹಾಗೂ ಸುದೀರ್ಘ ಕಾಯುವಿಕೆಗೆ ಇದೀಗ ರವಿಚಂದ್ರನ್ ಅವರ ಕಿರಿಯ ಪುತ್ರ, ನಟ ವಿಕ್ರಮ್ ರವಿಚಂದ್ರನ್ ಭರವಸೆಯ ಗುಡ್ ನ್ಯೂಸ್ ಒಂದನ್ನ ನೀಡಿದ್ದಾರೆ. ಡ್ಯಾಡಿ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಅದರ ಬಗ್ಗೆ ಮಾತುಕತೆ ನಡೀತಾ ಇದೆ” ಎಂದು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ. “ನನಗಿಂತ ನನ್ನ ಅಣ್ಣ ಮನೋರಂಜನ್ ಈ ಸಿನಿಮಾವನ್ನ ರೀ-ರಿಲೀಸ್ ಮಾಡಬೇಕು ಅಂತ ತುಂಬಾ ಆಸೆ ಪಟ್ಟರು. ನಾವು ನಮ್ಮ ಆಸ್ತಿ ಅಂತ ಹೇಳೋದು, ಸಿನಿಮಾ ಮತ್ತು ಜನರ ಪ್ರೀತಿ. ಡ್ಯಾಡಿ ನಮಗೆ ಹೇಳಿದ್ದು ಏನು ಅಂತಂದರೆ, ಇಷ್ಟೊಂದು ಜನ ಆಸೆ ಪಡ್ತಾ ಇದ್ದಾರೆ, ನೋಡಿ ಏನ್ ಮಾಡ್ತೀಯ ಅಂದ್ರು. ನನಗೆ ಗ್ರೀನ್ ಸಿಗ್ನಲ್ ಬಂದಿದೆ. ಅದರ ಬಗ್ಗೆ ಈಗಷ್ಟೇ ಶುರುವಾಗಿದೆ” ಎಂದು ತಿಳಿಸಿದ್ದಾರೆ. ಒಟ್ಟಾರೇ, ಕನ್ನಡ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮತ್ತೆ ರಿರಿಲೀಸ್ ಆಗಿ ರವಿಚಂದ್ರನ್ ಸೋಲಿನ ಸುಳಿಯಿಂದ ಹೊರಬಂದು ಮತ್ತಷ್ಟು ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ನೀಡುವಂತಾಗಲಿ ಎಂಬುದೇ ನಮ್ಮ ಹಾರೈಕೆ. #sandalwood #Shanti kranti #re release #ಸ್ಯಾಂಡಲ್ ವುಡ್ #ಶಾಂತಿಕ್ರಾಂತಿ#ರಿರಿಲೀಸ್ Share via: Facebook X (Twitter) LinkedIn More Post navigation ‘ರಾಮಾಯಣ: ಪಾರ್ಟ್ 1’ ಚಿತ್ರದ ಟ್ರೇಲರ್ ಬಿಡುಗಡೆ: ರಾವಣನ ಪಾತ್ರದಲ್ಲಿ ಯಶ್ ಅಬ್ಬರ!ನೆಟ್ಟಿಗರು ಫಿದಾ Toxic’ trailer out now: ದ್ವಿಪಾತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಯಶ್! ಆ.26ಕ್ಕೆ ವಿಶ್ವದಾದ್ಯಂತ ರಿಲೀಸ್