ಒಬಿಸಿ ಮೋರ್ಚಾ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಅಮರಪಾಲ್ ಮೌರ್ಯ ಅವರು ಚಾಹಲ್ ಅವರನ್ನು ಸಮಿತಿಗೆ ಸೇರಿಸಿಕೊಂಡಿದ್ದಾರೆ. ನವದೆಹಲಿ: ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರನ್ನು ಪಕ್ಷದ ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯಕಾರಿ ಸಮಿತಿಗೆ ‘ವಿಶೇಷ ಆಹ್ವಾನಿತ’ರಾಗಿ ಸೇರಿಸಿಕೊಳ್ಳಲಾಗಿದೆ. ಒಬಿಸಿ ಮೋರ್ಚಾ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಅಮರಪಾಲ್ ಮೌರ್ಯ ಅವರು ಚಾಹಲ್ ಅವರನ್ನು ಸಮಿತಿಗೆ ಸೇರಿಸಿಕೊಂಡಿದ್ದಾರೆ. ಏಕದಿನ ಮತ್ತು ಟಿ20ಐ ಸೇರಿದಂತೆ ವೈಟ್ ಬಾಲ್ ಸ್ವರೂಪದಲ್ಲಿ ಆಟ ಮುಂದುವರೆಸಿರುವ ಚಹಾಲ್ ಇತ್ತೀಚಿಗೆ ಪ್ರಥಮ ದರ್ಜೆ ಹಾಗೂ ರೆಡ್ ಬಾಲ್ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರು. ಇದೀಗ ಅವರನ್ನು ಬಿಜೆಪಿ ಒಬಿಸಿ ಮೋರ್ಚಾದ ಹೊಸದಾಗಿ ರಚಿಸಲಾದ ಕಾರ್ಯಕಾರಿ ಸಮಿತಿಗೆ ನೇಮಿಸಲಾಗಿದೆ. भारतीय जनता पार्टी के राष्ट्रीय अध्यक्ष श्री @NitinNabin द्वारा निम्नलिखित सदस्यों को भाजपा ओबीसी (अन्य पिछड़ा वर्ग) मोर्चा के राष्ट्रीय पदाधिकारी, राष्ट्रीय कार्यकारिणी सदस्य एवं अन्य दायित्वों पर नियुक्त किया गया है। pic.twitter.com/eA7HqyuxgC— BJP (@BJP4India) November 21, 2026 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿರ್ದೇಶನದಂತೆ, ಹಲವಾರು ರಾಜ್ಯಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಏಳು ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ಮೂವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನು ಒಬಿಸಿ ಮೋರ್ಚಾಗೆ ನೇಮಿಸಲಾಗಿದೆ. #Yuzvendra Chahal #joins BJP #new innings #National OBC Morcha #ಯುಜುವೇಂದ್ರ ಚಾಹಲ್ #ಬಿಜೆಪಿಗೆ ಸೇರ್ಪಡೆ #ಹೊಸ ಇನ್ನಿಂಗ್ಸ್ ಆರಂಭ #ರಾಷ್ಟ್ರೀಯ ಒಬಿಸಿ ಮೋರ್ಚಾ Share via: Facebook X (Twitter) LinkedIn More Post navigation ದೆಹಲಿ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ, ಟಿಕೆಟ್ ಇಲ್ಲ ದಾಖಲೆಗಳೂ ಇಲ್ಲ, ಒಳ ನುಗ್ಗಲು ಯತ್ನಿಸಿದವ CISF ವಶಕ್ಕೆ! Video