ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್: ಪಾಕಿಸ್ತಾನದಲ್ಲಿ ನಡೆಯುವ ಶಾಂತಿ ಒಪ್ಪಂದ ಮಾತುಕತೆಗೆ ದಾರಿ ಮಾಡಿಕೊಡದಿದ್ದರೆ ಇರಾನ್ ಮೇಲೆ ದಾಳಿ ಮಾಡಲು ಅಮೆರಿಕದ ಯುದ್ಧನೌಕೆಗಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, “ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ನೌಕೆಗಳನ್ನು ತುಂಬುತ್ತಿದ್ದೇವೆ. ಮಾತುಕತೆಗಳು ಯಶಸ್ವಿಯಾಗದೇ ಇದ್ದರೆ ನಾವು ಅವರನ್ನು ಸಂಪೂರ್ಣವಾಗಿ ನಾಶಮಾಡಲಿದ್ದೇವೆ ಎಂದು ಹೇಳಿದ್ದಾರೆ. “ಒಪ್ಪಂದವಾಗದಿದ್ದರೆ, ನಾವು ಆ ಶಸ್ತ್ರಾಸ್ತ್ರಗಳನ್ನು ಬಳಸುತ್ತೇವೆ, ಅದನ್ನೂ ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತೇವೆ ಎಂದಿದ್ದಾರೆ. ಇದಕ್ಕೂ ಮುನ್ನ, ತನ್ನ ಟ್ರೂತ್ ಸೋಶಿಯಲ್ ಜಾಲತಾಣದಲ್ಲಿ ಪ್ರಕಟಿಸಿದ ಚಿಕ್ಕ ಹಾಗೂ ಗೂಢ ಸಂದೇಶದಲ್ಲಿ ಟ್ರಂಪ್ “ವಿಶ್ವದ ಅತ್ಯಂತ ಶಕ್ತಿಶಾಲಿ ರಿಸೆಟ್!!!” ಬಗ್ಗೆ ಉಲ್ಲೇಖಿಸಿದ್ದರು. Share via: Facebook X (Twitter) LinkedIn More Post navigation Ceasefire Talks: ಪಾಕ್ ಮೇಲೆ ಅಮೆರಿಕ ಇರಾನ್ ಅಷ್ಟೊಂದು ನಂಬಿಕೆ ಇಡಲು ಇದೇ ಕಾರಣ! ಇಸ್ಲಾಮಾಬಾದ್ನಲ್ಲಿ 21 ಗಂಟೆಮಾತುಕತೆ; ಆದರೂ ಯುಎಸ್-ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?