21 ಗಂಟೆಗಳ ಖಾಸಗಿ ಮಾತುಕತೆಗಳ ನಂತರ ಹೆಚ್ಚಿನ ವಿವರ ನೀಡಲು ಹಾಗೂ ಸಾರ್ವಜನಿಕವಾಗಿ ಮಾತನಾಡಲು ಜೆಡಿ ವ್ಯಾನ್ಸ್ ನಿರಾಕರಿಸಿದರು. ಆದರೆ ಹೆಚ್ಚಿನ ವಿವಾದ ಇರುವುದು ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಎಂದು ಅವರು ಪ್ರಸ್ತಾಪಿಸಿದರು. ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಸ್ಲಾಮಾಬಾದ್: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್-ಇರಾನ್ ಶಾಂತಿ ಒಪ್ಪಂದ ವಿಫಲವಾಗಿದೆ. ಇದು ಇರಾನ್ ಗೆ ಕೆಟ್ಟ ಸುದ್ದಿ. ಫೈನಲ್ ಹಾಗೂ ಅತ್ಯುತ್ತಮವಾದ ಆಫರ್ ಮುಂದಿಟ್ಟ ನಂತರ ತಮ್ಮ ತಂಡ ನಿರ್ಗಮಿಸುತ್ತಿದೆ ಎಂದು ಅಮೆರಿಕದ ಉಪಾಧ್ಯಕ್ಷ JD ವ್ಯಾನ್ಸ್ ಹೇಳಿದ್ದಾರೆ. ಮಾತುಕತೆಯಾಕೆವಿಫಲವಾಯಿತು? 21 ಗಂಟೆಗಳ ಖಾಸಗಿ ಮಾತುಕತೆಗಳ ನಂತರ ಹೆಚ್ಚಿನ ವಿವರ ನೀಡಲು ಹಾಗೂ ಸಾರ್ವಜನಿಕವಾಗಿ ಮಾತನಾಡಲು ಜೆಡಿ ವ್ಯಾನ್ಸ್ ನಿರಾಕರಿಸಿದರು. ಆದರೆ ಹೆಚ್ಚಿನ ವಿವಾದ ಇರುವುದು ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಎಂದು ಅವರು ಪ್ರಸ್ತಾಪಿಸಿದರು. “ಸರಳ ಅಂಶವೆಂದರೆ, ಪರಮಾಣು ಶಸ್ತ್ರಾಸ್ತ್ರವನ್ನು ಪರಮಾಣು ಶಸ್ತ್ರಾಸ್ತ್ರ ದಾಸ್ತಾನು ಹೊಂದುವುದಿಲ್ಲ ಮತ್ತು ಅಭಿವೃದ್ಧಿಪಡಿಸಲ್ಲ ಎಂಬ ಇರಾನಿಯನ್ನರ ದೃಢವಾದ ಬದ್ಧತೆಯನ್ನು ನಾವು ನೋಡಬೇಕಾಗಿದೆ. ಇದು”ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಮುಖ ಗುರಿಯಾಗಿದ್ದು, ಅದನ್ನು ಮಾತುಕತೆ ಮೂಲಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಹೊಂದಲಾಗಿದ್ದ ಯಥೇಚ್ಚ ಪರಮಾಣು ಸಂಗ್ರಹವನ್ನು ಈಗಾಗಲೇ ನಾಶಪಡಿಸಲಾಗಿದೆ ಎಂದು ಟ್ರಂಪ್ ಅವರೇ ಹೇಳಿದ್ದಾರೆ ಎಂದು ವ್ಯಾನ್ಸ್ ತಿಳಿಸಿದರು. ಸರಳ ಪ್ರಶ್ನೆಯೆಂದರೆ, ಇರಾನಿಯನ್ನರು ಪರಮಾಣು ಅಸ್ತ್ರವನ್ನು ಅಭಿವೃದ್ಧಿಪಡಿಸದಿರಲು ಇರಾನಿನ ಬದ್ಧತೆಯನ್ನು ನಾವು ನೋಡುತ್ತೇವೆ. ಈಗ ಮಾತ್ರವಲ್ಲ, ಈಗಿನಿಂದ ಕೇವಲ ಎರಡು ವರ್ಷಗಳವರೆಗೆ ಅಲ್ಲ. ದೀರ್ಘಾವಧಿಯವರೆಗೆ? ಅದಕ್ಕೆ ಅವರು ಒಪ್ಪಿಲ್ಲ ಎಂದು ವ್ಯಾನ್ ಸುದ್ದಿಗಾರರಿಗೆ ಹೇಳಿದರು. ಅಣುಬಾಂಬ್ ಸಂಗ್ರಹ ಮಾಡುತ್ತಿಲ್ಲ ಎಂದು ಇರಾನ್ ಒತ್ತಿಹೇಳಿದ್ದು, ಫೆಬ್ರವರಿ 28ರಂದು ಹಾಗೂ ಕಳೆದ ವರ್ಷ ನಡೆದ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ನ ಸೂಕ್ಷ್ಮ ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿವೆ. ಇರಾನಿನ ಪರಮಾಣು ಸಂಗ್ರಹ ಕುರಿತು ದಿನವಿಡೀ ನಡೆದ ಮಾತುಕತೆ ವೇಳೆ ಚರ್ಚೆ ನಡೆದಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಜೆಡಿ ವ್ಯಾನ್ಸ್, ಹಲವು ವಿಚಾರ ಕುರಿತು ಚರ್ಚೆ ನಡೆದಿರುವುದಾಗಿ ತಿಳಿಸಿದರು. ಇರಾನಿನ ಸರ್ಕಾರಿ ನಿಯಂತ್ರಣದ ಪ್ರೆಸ್ ಟಿವಿಯ ವರದಿಯ ಪ್ರಕಾರ, ಹಾರ್ಮುಜ್ ಜಲಸಂಧಿ ಸೇರಿದಂತೆ ವಿವಿಧ ವಿಷಯಗಳು ಮಾತುಕತೆಯ ಯಶಸ್ವಿಯಾಗದಿರಲು ಕಾರಣ ಎನ್ನಲಾಗಿದೆ. ಸಾಕಷ್ಟುಹೊಂದಿಕೊಳ್ಳಲುಪ್ರಯತ್ನ: ಟ್ರಂಪ್ ಹೇಳಿದ್ದಂತೆ ಸಾಕಷ್ಟು ಹೊಂದಿಕೊಳ್ಳುವ ಒಪ್ಪಂದವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಾತುಕತೆಗೆಗೆ ಬಂದಿದ್ದೇವು ಎಂದು ಜೆಡಿ ವ್ಯಾನ್ಸ್ ಹೇಳಿದರು. ಅಮೆರಿಕದಅಸಮಂಜಸಬೇಡಿಕೆಗಳು: ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಇಸ್ಲಾಮಾಬಾದ್ ಮಾತುಕತೆ ವಿಫಲತೆಗೆ ಅಮೆರಿಕದ ಅಸಮಂಜಸ ಬೇಡಿಕೆಗಳನ್ನು ಇರಾನ್ ದೂಷಿಸಿದೆ ಎಂದು ಇರಾನ್ TV IRIB ಭಾನುವಾರ ತಿಳಿಸಿದೆ. ಇರಾನಿಯರ ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸುವ ಸಲುವಾಗಿ ಇರಾನ್ ನಿಯೋಗವು ನಿರಂತರವಾಗಿ ಮತ್ತು ತೀವ್ರವಾಗಿ 21 ಗಂಟೆಗಳ ಕಾಲ ಮಾತುಕತೆ ನಡೆಸಿತು.ಇರಾನ್ ನಿಯೋಗದ ವಿವಿಧ ಉಪಕ್ರಮಗಳ ಹೊರತಾಗಿಯೂ, ಅಮೆರಿಕದ ಕಡೆಯ ಅಸಮಂಜಸ ಬೇಡಿಕೆಗಳು ಮಾತುಕತೆಗಳ ಪ್ರಗತಿಯನ್ನು ತಡೆಯಿತು. ಹೀಗಾಗಿ ಮಾತುಕತೆಗಳು ಕೊನೆಗೊಂಡವು ಎಂದು IRIB ಹೇಳಿದೆ. Post navigation ಇರಾನ್ ಬಗ್ಗದೇ ಹೋದಲ್ಲಿ ಸರ್ವನಾಶ! ಶಾಂತಿ ಮಾತುಕತೆಗೂ ಮುನ್ನಾ ಟ್ರಂಪ್ ಬೆದರಿಕೆ ಇರಾನ್ ಮೇಲೆ ಅಮೆರಿಕ ನೌಕಪಡೆ ದಿಗ್ಬಂಧನ ಜಾರಿ! US Navy Begins Hormuz Blockade