ಅನಿರುದ್ಧ್- ಕಾವ್ಯ ಮಾರನ್


ಈ ಜೋಡಿ ನವೆಂಬರ್ 21 ಮತ್ತು ನವೆಂಬರ್ 22 ರಂದು ಚೆನ್ನೈನಲ್ಲಿ ಎರಡು ವಿವಾಹ ಆರತಕ್ಷತೆಗಳನ್ನು ಆಯೋಜಿಸಿತ್ತು. ಅಲ್ಲದೆ ನವೆಂಬರ್ 25 ರಂದು ಸನ್ ಗ್ರೂಪ್ ಉದ್ಯೋಗಿಗಳಿಗಾಗಿ ಮತ್ತೊಂದು ಆರತಕ್ಷತೆಯನ್ನು ಆಯೋಜಿಸುತ್ತಿದ್ದಾರೆ.

ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನ ಸಿಇಒ ಕಾವ್ಯ ಮಾರನ್ ಅವರು ನವೆಂಬರ್ 11 ರಂದು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಜೋಡಿ ನವೆಂಬರ್ 21 ಮತ್ತು ನವೆಂಬರ್ 22 ರಂದು ಚೆನ್ನೈನಲ್ಲಿ ಎರಡು ವಿವಾಹ ಆರತಕ್ಷತೆಗಳನ್ನು ಆಯೋಜಿಸಿತ್ತು. ಅಲ್ಲದೆ ನವೆಂಬರ್ 25 ರಂದು ಸನ್ ಗ್ರೂಪ್ ಉದ್ಯೋಗಿಗಳಿಗಾಗಿ ಮತ್ತೊಂದು ಆರತಕ್ಷತೆಯನ್ನು ಆಯೋಜಿಸುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಡಿಯೋ ಪ್ರಕಾರ, ಮಾಧ್ಯಮ ಸಮೂಹದ ಉದ್ಯೋಗಿಗಳಿಗೆ ವಿವಾಹ ಆಮಂತ್ರಣ ಪತ್ರಿಕೆ ಜೊತೆ ಚಾಕೊಲೇಟ್‌ ಹಾಗೂ ಚಿನ್ನದ ಉಂಗುರ ಹೊಂದಿರುವ ಉಡುಗೊರೆ ಪೆಟ್ಟಿಗೆಗಳು ಬಂದಿವೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ಹಲವಾರು ಕ್ಲಿಪ್‌ಗಳು ಉದ್ಯೋಗಿಗಳು ಉಡುಗೊರೆಗಳನ್ನು ಅನ್‌ಬಾಕ್ಸ್ ಮಾಡುವುದು ಮತ್ತು ತಮಗೆ ಬಂದ ಗಿಫ್ಟ್ ಗೆ ಪ್ರತಿಕ್ರಿಯಿಸುವುದನ್ನು ತೋರಿಸುತ್ತವೆ.

ವೈರಲ್ ಆದ ಒಂದು ವೀಡಿಯೊದಲ್ಲಿ, ಉಡುಗೊರೆ ಪೆಟ್ಟಿಗೆಯನ್ನು ತೆರೆದ ನಂತರ ಉದ್ಯೋಗಿಯೊಬ್ಬರು ಒಳಗೆ ಚಿನ್ನದ ಉಂಗುರು ನೋಡಿ ಆಶ್ಚರ್ಯಚಕಿತರಾಗಿದ್ದಾರೆ

#KavyaMaran #Anirudh Ravichander #married #Gold Rings #ಕಾವ್ಯಮಾರನ್  #ಅನಿರುದ್ಧ್ ರವಿಚಂದರ್ #ವಿವಾಹ #ಗೋಲ್ಡ್ ರಿಂಗ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link