ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತದಲ್ಲಿ 7 ಮಂದಿ ಮೃತಪಟ್ಟರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಸಮೀಪ ವಿದ್ಯುತ್ ಪ್ರವಹಿಸಿ ಒಬ್ಬರು ಹಾಗೂ ಜೆಪಿ ನಗರದಲ್ಲೂ ವಿದ್ಯುತ್ ಸ್ಪರ್ಶದಿಂದ ಮತ್ತೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು: ಬುಧವಾರ ಸಂಜೆ ಸುರಿದ ಭಾರೀ ಮಳೆ ಸಿಲಿಕಾನ್ ಸಿಟಿಯನ್ನು ತತ್ತರಗೊಳಿಸಿದ್ದು, ಮಳೆಯಿಂದಾಗಿ ಸೃಷ್ಟಿಯಾದ ಅವಾಂತರಗಳಿಗೆ ಒಟ್ಟು 9 ಮಂದಿ ಜೀವ ಕಳೆದುಕೊಂಡಿದ್ದಾರೆ. ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತದಲ್ಲಿ 7 ಮಂದಿ ಮೃತಪಟ್ಟರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಸಮೀಪ ವಿದ್ಯುತ್ ಪ್ರವಹಿಸಿ ಒಬ್ಬರು ಹಾಗೂ ಜೆಪಿ ನಗರದಲ್ಲೂ ವಿದ್ಯುತ್ ಸ್ಪರ್ಶದಿಂದ ಮತ್ತೊಬ್ಬರು ಮೃತಪಟ್ಟಿದ್ದಾರೆ. ಭಾರತ ಹವಾಮಾನ ಇಲಾಖೆ (IMD) ಪ್ರಕಾರ, ಬೆಳಗ್ಗೆ 8.30ರಿಂದ ರಾತ್ರಿ 8.30ರವರೆಗೆ ನಗರದಲ್ಲಿ ಒಟ್ಟು 111 ಮಿಮೀ ಮಳೆಯಾಗಿದ್ದು, ಇದು ಏಪ್ರಿಲ್ ತಿಂಗಳಲ್ಲಿಯೇ ಇದುವರೆಗೆ ದಾಖಲಾಗಿದ್ದ ಅತಿ ಹೆಚ್ಚು ಮಳೆಯಾಗಿದೆ ಎಂದು ತಿಳಿಸಿದೆ. ಇದಕ್ಕೂ ಮೊದಲು 2001ರ ಏಪ್ರಿಲ್ 19ರಂದು 108.6 ಮಿಮೀ ಮಳೆಯಾಗಿದ್ದ ದಾಖಲೆ ಇತ್ತು. ಗುರುವಾರ ಸಂಜೆ ಮಿಂಚು-ಗುಡುಗು ಹಾಗೂ ಆಲಿಕಲ್ಲು ಸಹಿತ ಕೇವಲ ಒಂದು ಗಂಟೆಯಲ್ಲಿ 8 ಸೆಂ.ಮೀ (80 ಮಿಮೀ) ಮಳೆಯಾಗಿದ್ದು, ಗಂಟೆಗೆ 75 ಕಿಮೀ ವೇಗದ ಗಾಳಿ ಬೀಸಿರುವುದು ದಾಖಲಾಗಿದೆ. ಮುಂದಿನ ಎರಡು ದಿನಗಳವರೆಗೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಜೊತೆಗೆ ತುಮಕೂರು, ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯ ಸಾಧ್ಯತೆ ಇದೆ ಎಂದು IMD ಎಚ್ಚರಿಕೆ ನೀಡಿದೆ. ನಂತರ ಗರಿಷ್ಠ ತಾಪಮಾನ 1-2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ. ಮಳೆಯ ಪರಿಣಾಮವಾಗಿ ನಗರದಲ್ಲಿ 170 ಮರಗಳು ಉರುಳಿದರೆ, 408 ಕೊಂಬೆಗಳು ಮುರಿದು ಬಿದ್ದಿವೆ. ಇದರ ಪರಿಣಾಮ ಅನೇಕ ವಾಹನಗಳು ಹಾನಿಗೊಳಗಾಗಿವೆ. #karnatakanews #bengaluru #heavyrain #Damage #ಕರ್ನಾಟಕ #ಬೆಂಗಳೂರು# ಭಾರಿ ಮಳೆ #ಹಾನಿ Post navigation ಏರ್ ಶೋ ನಡೆಯುವ ಯಲಹಂಕ ವಾಯುನೆಲೆಯೂ ಅರಣ್ಯ ಭೂಮಿ: ಈಶ್ವರ ಖಂಡ್ರೆ! 227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಯೋಜನೆಗೆ ಸಂಪುಟ ಸಭೆ ಅಸ್ತು!