ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ 250 ಕಿ.ಮೀದೂರದಲ್ಲಿರುವ ಖೈಬರ್ ಪ್ರದೇಶದ ಲಾಂಡಿ ಕೋಟಲ್ ನಲ್ಲಿ ಅಪರಿಚಿತ ಬಂದೂಕುದಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶೇಖ್ ಯುಸುಫ್ ಅಫ್ರಿದಿ ಇಸ್ಲಾಮಾಬಾದ್: ಮುಂಬೈದಾಳಿಯ ರೂವಾರಿಗಳಲ್ಲಿ ಒಬ್ಬನಾದ ಹಫೀಜ್ ಸಯೀದ್ ಆಪ್ತ ಮತ್ತು ಲಷ್ಕರ್-ಇ- ತೋಯ್ಬಾ ಸಂಘಟನೆ ಮುಖಂಡ ಶೇಖ್ ಯುಸುಫ್ ಅಫ್ರಿದಿ ಗುಂಡೇಟಿಗೆ ಬಲಿಯಾಗಿದ್ದಾನೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ 250 ಕಿ.ಮೀ ದೂರದಲ್ಲಿರುವ ಖೈಬರ್ ಪ್ರದೇಶದ ಲಾಂಡಿ ಕೋಟಲ್ ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಪೊಲೀಸರುತಿಳಿಸಿದ್ದಾರೆ. ಶೇಖ್ ಯೂಸುಫ್ ಅಫ್ರಿದಿ ಬಹಳ ಹಿಂದಿನಿಂದಲೂ ಲಷ್ಕರ್ ನ ಪ್ರಮುಖ ಕಾರ್ಯಕರ್ತ. ಆತ ಖೈಬರ್ ಪಖ್ತುಂಖ್ವಾದಲ್ಲಿ ಮುಜಾಹಿದ್ದೀನ್ಗಳಿಗೆ ತರಬೇತಿ ನೀಡಿದನು. ಅಲ್ಲಿಂದ ಅವರನ್ನು ಕಾಶ್ಮೀರ ಮತ್ತು ಇತರ ಸ್ಥಳಗಳಿಗೆ ಕಳುಹಿಸಲಾಯಿತು. ಅಫ್ರಿದಿಯನ್ನು ಲಷ್ಕರ್ನ ಖೈಬರ್ ಪಖ್ತುಂಖ್ವಾ ಮುಖ್ಯಸ್ಥ ಎಂದು ಪರಿಗಣಿಸಲಾಗಿದೆ. ಆತ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಜೊತೆ ನಿಕಟ ಸಂಬಂಧ ಹೊಂದಿದ್ದಾನೆ. ಹಫೀಜ್ ಸಯೀದ್ ಜೊತೆ ಅಫ್ರಿದಿ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದನು. Share via: Facebook X (Twitter) LinkedIn More Post navigation ಸಿಎಂ ಹುದ್ದೆ ಬದಲಾವಣೆ: ‘ಮುಂದಿನ ಕ್ರಾಂತಿ’ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದೇನೆ- ಎಚ್.ಡಿ. ಕುಮಾರಸ್ವಾಮಿ! ಡಾ. ರಾಜ್ ಕುಮಾರ್ ಸ್ಮಾರಕ ಬಗ್ಗೆ ಮಾತನಾಡಲು ಚೇತನ್ ಯೋಗ್ಯರಲ್ಲ- ನಿಖಿಲ್ ಕುಮಾರಸ್ವಾಮಿ!