ಉಭಯ ನಾಯಕರು ಇರಾನ್ ಸಂಘರ್ಷ ಹಾಗೂ ಉಕ್ರೇನ್ ಬಿಕ್ಕಟ್ಟಿನ ಕುರಿತು ಸುಮಾರು 90 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮಾಸ್ಕೋ: ಇರಾನ್ ಸಂಘರ್ಷ ಮುಂದುವರೆದಿರುವಂತೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸುಮಾರು 90 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು ಉಕ್ರೇನ್ ಪರಿಸ್ಥಿತಿ ಬಗ್ಗೆಯೂ ಗಂಭೀರ ಚರ್ಚೆ ನಡೆಸಿದ್ದಾರೆ. ಈ ವೇಳೆ ಅಮೆರಿಕ ಮತ್ತು ಇಸ್ರೇಲ್ ಮತ್ತೆ ದಾಳಿಗೆ ಮುಂದಾದರೆ ಅಂತಾರಾಷ್ಟ್ರೀಯ ಸಮುದಾಯದ ಮೇಲೆ ತೀವ್ರ ಹೊಡೆತ ಬೀಳಲಿದೆ ಎಂದು ಪುಟಿನ್ ಅವರು ಟ್ರಂಪ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ರಷ್ಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇರಾನ್ ಜೊತೆಗಿನ ಕದನ ವಿರಾಮ ವಿಸ್ತರಿಸುವ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ವ್ಲಾಡಿಮಿರ್ ಪುಟಿನ್ ಶ್ಲಾಘಿಸಿದ್ದಾರೆ. ಈ ನಿರ್ಧಾರ ರಾಜತಾಂತ್ರಿಕ ಮಾತುಕತೆಗಳಿಗೆ ಹೆಚ್ಚಿನ ಅವಕಾಶ ನೀಡುತ್ತದೆ ಮತ್ತು ಈ ಭಾಗದಲ್ಲಿ ಶಾಂತಿ ಸ್ಥಾಪನೆಗೆ ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಒಂದು ವೇಳೆ ಅಮೆರಿಕ ಅಥವಾ ಇಸ್ರೇಲ್ ಮತ್ತೊಮ್ಮೆ ಮಿಲಿಟರಿ ದಾಳಿಗೆ ಮುಂದಾದರೆ ಅದರ ಪರಿಣಾಮ ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಟ್ಟಲಿದೆ ಎಂದು ಪುಟಿನ್ ಆತಂಕ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಎಲ್ಲಾ ರೀತಿಯ ತಾಂತ್ರಿಕ ನೆರವು ನೀಡಲು ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. #IRAN WAR #Ukraine ceasefire #RussianPresidentVladimirPutin #Donaldtrump #meeting # ಇರಾನ್ ಯುದ್ಧ #ಉಕ್ರೇನ್ ಕದನ ವಿರಾಮ #ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ #ಡೊನಾಲ್ಡ್ ಟ್ರಂಪ್ #ದೂರವಾಣಿ ಮಾತುಕತೆ Share via: Facebook X (Twitter) LinkedIn More Post navigation ಇರಾನ್ ವಿರುದ್ಧ ಮತ್ತೆ ಯುದ್ಧಕ್ಕೆ ಇಸ್ರೇಲ್ ತಯಾರಿ: ಭಾರತೀಯ ನಾಗರಿಕರಿಗೆ ತುರ್ತು ಆದೇಶ! ಪ್ರಸ್ತಾವನೆಯಲ್ಲಿ ಅತಿಯಾದ ಬೇಡಿಕೆ: ಇರಾನ್ ವಿರುದ್ಧ ಟ್ರಂಪ್ ಕಿಡಿ!