ದಿನದ ಆರಂಭದಲ್ಲಿ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದ ಪ್ರಜ್ಞಾನಂದ, ನಿರ್ಣಾಯಕ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 18 ಅಂಕಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿದರು. ಓಸ್ಲೋ: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಭರ್ಜರಿ ಕಂಬ್ಯಾಕ್ ಆಗಿದ್ದಾರೆ. ನಾರ್ವೆ ಚೆಸ್ ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಪ್ರತಿಷ್ಠಿತ ನಾರ್ವೆ ಚೆಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ಮೊದಲ ಆಟಗಾರ ಎಂಬ ಹಿರಿಮೆ ಅವರದ್ದಾಗಿದೆ. ದಿನದ ಆರಂಭದಲ್ಲಿ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದ ಪ್ರಜ್ಞಾನಂದ, ನಿರ್ಣಾಯಕ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 18 ಅಂಕಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿದರು. ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಮತ್ತು ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಸೇರಿದಂತೆ ಯಾರಿಗೂ ಸಾಧ್ಯವಾಗದ ಅಪರೂಪದ ಸಾಧನೆಯನ್ನು ಚೆನ್ನೈ ಮೂಲದ 20 ವರ್ಷದ ಪ್ರಜ್ಞಾನಂದ ಮಾಡಿದ್ದಾರೆ. ಟೂರ್ನಿಯ ಆರಂಭದಲ್ಲಿ ಪ್ರಜ್ಞಾನಂದ ಅವರು ಆರು ಗಣ್ಯ ಆಟಗಾರರ ಎದುರು ನಿಧಾನಗತಿಯ ಮುನ್ನಡೆ ಪಡೆದಿದ್ದರು. ಆದರೆ, ಟೂರ್ನಿಯ ದ್ವಿತೀಯಾರ್ಧದಲ್ಲಿ ಭರ್ಜರಿ ವೇಗ ಪಡೆದುಕೊಂಡರು. ಏಳು ಬಾರಿಯ ನಾರ್ವೆ ಚೆಸ್ ಚಾಂಪಿಯನ್ ಮತ್ತು ವಿಶ್ವದ ನಂ. 1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಎರಡು ಬಾರಿ ಸೋಲಿಸಿದ್ದಾರೆ. #Norway Chess title #R Praggnanandhaa #scripts history #ನಾರ್ವೆ ಚೆಸ್ ಪ್ರಶಸ್ತಿ #ಆರ್ಪ್ರಜ್ಞಾನಂದ #ಇತಿಹಾಸಸೃಷ್ಟಿ Share via: Facebook X (Twitter) LinkedIn More Post navigation IPL 2026: ಕೆ.ಎಲ್. ರಾಹುಲ್ ಅಬ್ಬರ, ರಾಜಸ್ಥಾನ ವಿರುದ್ಧ ಡೆಲ್ಲಿಗೆ 7 ವಿಕೆಟ್ ಗೆಲುವು! T20 World Cup: ಭಾರತ ತಂಡಕ್ಕೆ ದೊಡ್ಡ ಹೊಡೆತ! ಟೂರ್ನಿಯಿಂದ ಶ್ರೇಯಾಂಕಾ ಪಾಟೀಲ್ ಔಟ್!