ಡೆಲ್ಲಿ ಕ್ಯಾಪಿಟಲ್ಸ್


ಸೋಲು ಕಂಡ ರಾಜಸ್ಥಾನ್‌ ರಾಯಲ್ಸ್‌ ನಾಲ್ಕನೇ ಸ್ಥಾನದಲ್ಲೇ ಉಳಿದುಕೊಂಡಿದೆ. ತಂಡ 10 ಪಂದ್ಯಗಳನ್ನು ಆಡಿದೆ. ಏಕೈಕ ಸೋಲು ಕಂಡಿರುವ ಪಂಜಾಬ್‌ ಕಿಂಗ್ಸ್‌ 13 ಅಂಕದೊಂದಿಗೆ ಅಗ್ರಸ್ಥಾನಿಯಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಜೈಪುರ: ರಾಜಸ್ಥಾನದ ಪಿಂಕ್ ಸಿಟಿ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಐಪಿಎಲ್ ನ ರೋಚಕ 43 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಗಳ ಅಂತರದಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ತವರಿನಲ್ಲಿಯೇ ಮಣಿಸಿದೆ. ಜತೆಗೆ ಅಂಕಪಟ್ಟಿ ಯಲ್ಲಿಯೂ ಜಿಗಿತ ಕಂಡಿದೆ. ಆಡಿದ 9 ಪಂದ್ಯಗಳಲ್ಲಿ 4 ಗೆಲುವು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸದ್ಯ 6ನೇ ಸ್ಥಾನದಲ್ಲಿದೆ. 

ಸೋಲು ಕಂಡ ರಾಜಸ್ಥಾನ್‌ ರಾಯಲ್ಸ್‌ ನಾಲ್ಕನೇ ಸ್ಥಾನದಲ್ಲೇ ಉಳಿದುಕೊಂಡಿದೆ. ತಂಡ 10 ಪಂದ್ಯಗಳನ್ನು ಆಡಿದೆ. ಏಕೈಕ ಸೋಲು ಕಂಡಿರುವ ಪಂಜಾಬ್‌ ಕಿಂಗ್ಸ್‌ 13 ಅಂಕದೊಂದಿಗೆ ಅಗ್ರಸ್ಥಾನಿಯಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಪೇರಿಸಿತು. ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ 6, ವೈಭವ್ ಸೂರ್ಯವಂಶಿ ಕೇವಲ 4 ರನ್ ಗಳಿಸಿ ಔಟಾಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ಬಳಿಕ ಜೊತೆಯಾದ ಧ್ರುವ್ ಜುರೆಲ್ 42 ಹಾಗೂ ನಾಯಕ ರಿಯಾನ್ ಪರಾಗ್ 90 ರನ್ ಗಳ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಗಳನ್ನು ಬೆಂಡೆತ್ತಿದರು. ಈ ಜೋಡಿ ಬೇರ್ಪಟ್ಟ ನಂತರ ರವೀಂದ್ರ ಜಡೇಜಾ 20, ಫೆರೆರಿಯಾ 47, ಹಾಗೂ ಶುಭಂ ದುಬೆ 6 ರನ್ ಗಳಿಸುವುದರೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಬೃಹತ್ 225 ರನ್ ಕಲೆಹಾಕಿತು.

ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಜೆಮಿಸನ್, ಅಕ್ಷರ್ ಪಟೇಲ್, ಟಿ. ನಟರಾಜನ್ 1 ತಲಾ ಒಂದೊಂದು ವಿಕೆಟ್ ಪಡೆದರು. 226 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪಥುಂ ನಿಸ್ಸಾಂಕಾ 62, ಕೆಎಲ್ ರಾಹುಲ್ ಆಕರ್ಷಕ 75 ರನ್ ಬಾರಿಸುವುದರೊಂದಿಗೆ ಉತ್ತಮ ಅಡಿಪಾಯ ಹಾಕಿದರು.

ಬಳಿಕ ಬಂದ ನಿತಿಶ್ ರಾಣಾ 33, ತ್ರಿಸ್ಟಾನ್ ಸ್ಟಬ್ಬಾಸ್ 18, ಅಶುತೋಷ್ ಶರ್ಮಾ 25 ರನ್ ಗಳಿಸುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್ ಗಳಲ್ಲಿ ಇನ್ನೂ ಐದು ಎಸೆತ ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆಕರ್ಷಕ 75 ರನ್ ಗಳೊಂದಿಗೆ ಪಂದ್ಯ ಗೆಲ್ಲಲು ಕಾರಣರಾದ ಕೆ.ಎಲ್. ರಾಹುಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. 

ರಾಜಸ್ಥಾನ್‌ ವಿರುದ್ಧದ ಪಂದ್ಯದಲ್ಲಿ ಬೃಹತ್‌ ಮೊತ್ತದ ಚೇಸಿಂಗ್‌ ವೇಳೆ 40 ಎಸೆತಗಳಲ್ಲಿ 75 ರನ್ ಗಳಿಸಿದ ಕೆ.ಎಲ್ ರಾಹುಲ್ ತಮ್ಮ ಈ ಬ್ಯಾಟಿಂಗ್‌ ಪ್ರದರ್ಶನದಿಂದ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡರು. ಅವರು ಈಗ 433ರನ್‌ ಗಳಿಸಿದ್ದಾರೆ. ಅಭಿಷೇಕ್‌ ಶರ್ಮ(425) ಈ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

#IPL2026 #Delhicapital #won #Rajastanroyals #ಐಪಿಎಲ್ 2026 #ಡೆಲ್ಲಿ ಕ್ಯಾಪಿಟಲ್ಸ್ # ಗೆಲುವು# ರಾಜಸ್ಥಾನ ರಾಯಲ್ಸ್

Leave a Reply

Your email address will not be published. Required fields are marked *