ಓಮನ್ಬ ಬಳಿ ಅಮೆರಿಕದ ಹೆಲಿಕಾಪ್ಟರ್ ಪತನಗೊಂಡ ನಂತರ ಇರಾನ್ ಮೇಲಿನ ತನ್ನ ವೈಮಾನಿಕ ದಾಳಿಯನ್ನು ಪೂರ್ಣಗೊಳಿಸಿರುವುದಾಗಿ ಅಮೆರಿಕ ಸೇನೆ ಬುಧವಾರ ತಿಳಿಸಿದೆ.ಹಾರ್ಮುಜ್ ಜಲಸಂಧಿ ಬಳಿಯ ಇರಾನಿನ ವಾಯು ರಕ್ಷಣಾ ವ್ಯವಸ್ಥೆ, ನಿಯಂತ್ರಣ ಕೇಂದ್ರಗಳು ಮತ್ತು ರಾಡಾರ್ ಕಣ್ಗಾವಲು ತಾಣಗಳನ್ನು ನಿಖರವಾದ ಶಸಸ್ತ್ರಗಳೊಂದಿಗೆ ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಸೇನೆಯ ಕೇಂದ್ರ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ.ದಾಳಿಯಲ್ಲಿ ಅಮೆರಿಕದ ವಾಯುಪಡೆ ಮತ್ತು ನೌಕಾಪಡೆಯ ಯುದ್ಧ ವಿಮಾನಗಳು ಭಾಗಿಯಾಗಿವೆ ಎಂದು ಅದು ವಿವರಿಸಿದೆ. ಬಂದರ್ ಅಬ್ಬಾಸ್ ಮತ್ತಿತರ ಕಡೆಗಳಲ್ಲಿನ ದಾಳಿಗಳನ್ನು ಇರಾನ್ ಒಪ್ಪಿಕೊಂಡಿದೆ, ಆದರೆ ಹಾನಿಯ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ.ಇರಾನಿನ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ. ಯುದ್ಧದ ಸಮಯದಲ್ಲಿ ಹಾರ್ಮುಜ್ ಜಲಸಂಧಿಯಲ್ಲಿರುವ ಕ್ವೆಶ್ಮ್ ದ್ವೀಪದಲ್ಲಿ ಸ್ಫೋಟಗಳು ಕೇಳಿಬಂದಿವೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ.ಇದಕ್ಕೂ ಮುನ್ನಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಜಲಸಂಧಿಯ ಮೇಲೆ ಗಸ್ತು ತಿರುಗುತ್ತಿದ್ದ ಹೆಲಿಕಾಪ್ಟರ್ ನನ್ನು ಇರಾನ್ ಹೊಡೆದುರುಳಿಸಿದೆ. ಅಮೆರಿಕ ಈಗ ಅಗತ್ಯವಾಗಿ ಈ ದಾಳಿಗೆ ಪ್ರತಿಕ್ರಿಯಿಸಬೇಕು” ಎಂದು ಘೋಷಿಸಿದ್ದರು. ಇರಾನ್ ಪಡೆಗಳು “ಯಾವುದೇ ದಾಳಿ ಅಥವಾ ಬೆದರಿಕೆಗೆ ಉತ್ತರಿಸದೆ ಬಿಡುವುದಿಲ್ಲ. ನೀವು ಸುರಕ್ಷಿತವಾಗಿರಲು ಬಯಸಿದರೆ ನಮ್ಮ ಪ್ರದೇಶವನ್ನು ಬಿಟ್ಟು ಹೋಗಿ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದರು.ಹೆಲಿಕಾಪ್ಟರ್ ಪತನ ಮತ್ತು ಯುಎಸ್ ಮಿಲಿಟರಿಯ ದಾಳಿಗಳು ಎರಡು ತಿಂಗಳ ಕದನ ವಿರಾಮವನ್ನು ಮತ್ತಷ್ಟು ದುರ್ಬಲಗೊಳಿಸಿವೆ. ಇಸ್ರೇಲಿ ದಾಳಿಯಲ್ಲಿ ದೇಶದ ವಾಯು ರಕ್ಷಣಾ ಘಟಕಗಳ ಇಬ್ಬರು ಸದಸ್ಯರು ಬಲಿಯಾಗಿದ್ದಾರೆ ಎಂದು ಇರಾನಿನ ರಾಜ್ಯ ಟಿವಿ ಚಾನೆಲ್ ಮಂಗಳವಾರ ಹೇಳಿದೆ. #Iranwar #America #Donaldtrump# ಇರಾನ್ ಯುದ್ಧ!ಅಮೆರಿಕ! Share via: Facebook X (Twitter) LinkedIn More Post navigation ಪ್ರಸ್ತಾವನೆಯಲ್ಲಿ ಅತಿಯಾದ ಬೇಡಿಕೆ: ಇರಾನ್ ವಿರುದ್ಧ ಟ್ರಂಪ್ ಕಿಡಿ! ಶಾಂತಿ ಒಪ್ಪಂದಕ್ಕೆ ಟ್ರಂಪ್- ಇರಾನ್ ಅಧ್ಯಕ್ಷರ ಸಹಿ,ಪಶ್ಚಿಮ ಏಷ್ಯಾ ಯುದ್ಧ ಅಂತ್ಯ! ತಕ್ಷಣದಿಂದಲೇ Hormuz ಜಲಸಂಧಿ ಓಪನ್..!