ಅಮೆರಿಕಾ ಮತ್ತು ಇರಾನ್ ನಡುವಿನ ಐತಿಹಾಸಿಕ ‘ಇಸ್ಲಾಮಾಬಾದ್ ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್’ (MoU)ಗೆ ಅಧಿಕೃತವಾಗಿ ಸಹಿ ಹಾಕಲಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ. ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಮಹತ್ವದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿದ್ದ ಯುದ್ಧ ಅಂತ್ಯಗೊಂಡಿದೆ. ಅಮೆರಿಕಾ ಮತ್ತು ಇರಾನ್ ನಡುವಿನ ಐತಿಹಾಸಿಕ ‘ಇಸ್ಲಾಮಾಬಾದ್ ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್’ (MoU)ಗೆ ಅಧಿಕೃತವಾಗಿ ಸಹಿ ಹಾಕಲಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅವರು ಪೋಸ್ಟ್ ಮಾಡಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಮಧ್ಯಸ್ಥಗಾರರಾಗಿ ತಾವೂ ಇದನ್ನು ಅನುಮೋದಿಸಿದ್ದಾಗಿ ಅವರು ತಿಳಿಸಿದ್ದಾರೆ. ಈ ಒಪ್ಪಂದವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮೊದಲ ಹಂತವಾಗಿ ಇರಾನ್ ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲಿದೆ. ಅದೇ ವೇಳೆ ಅಮೆರಿಕಾ ತನ್ನ ನೌಕಾ ದಿಗ್ಬಂಧನವನ್ನು ಕೂಡಲೇ ಹಿಂತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ. ಈ ಒಪ್ಪಂದವು ಉಭಯ ದೇಶಗಳು ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಬದ್ಧತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮಧ್ಯಪ್ರಾಚ್ಯದಲ್ಲಿ ದೊಡ್ಡ ಪ್ರಮಾಣದ ಯುದ್ಧಕ್ಕೆ ಕಾರಣವಾಗಬಹುದಾಗಿದ್ದ ಸಂಘರ್ಷವನ್ನು ಶಾಂತಿಯುತವಾಗಿ ಅಂತ್ಯಗೊಳಿಸಲು ಮುಂದಾಗಿದ್ದಕ್ಕಾಗಿ ಟ್ರಂಪ್ ಅವರನ್ನು ಅಭಿನಂದಿಸಿದ್ದಾರೆ. ಅಮೆರಿಕಾದ ಮಾತುಕತೆ ತಂಡದಲ್ಲಿದ್ದ ಜೆಡಿ ವ್ಯಾನ್ಸ್, ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರ ಪ್ರಯತ್ನಗಳನ್ನೂ ಅವರು ಶ್ಲಾಘಿಸಿದ್ದಾರೆ. ಇದೇ ವೇಳೆ ಇರಾನ್‌ನ ಪರವಾಗಿ ಮಾತುಕತೆ ನಡೆಸಿದ ಮೊಹಮ್ಮದ್ ಬಗರ್ ಗಲಿಬಾಫ್, ಅಬ್ಬಾಸ್ ಅರಾಘ್ಚಿ ಮತ್ತು ಎಸ್ಕಂದರ್ ಮೊಮೆನಿ ಅವರ ಪಾತ್ರವನ್ನೂ ಮೆಚ್ಚಿದ್ದಾರೆ. #DonaldTrump #Iran’s President #sign deal #end West Asia war #ಡೊನಾಲ್ಡ್ ಟ್ರಂಪ್ #ಇರಾನ್ ಅಧ್ಯಕ್ಷ #ಒಪ್ಪಂದಕ್ಕೆ ಸಹಿ #ಪಶ್ಚಿಮ ಏಷ್ಯಾಯುದ್ಧ ಅಂತ್ಯ Share via: Facebook X (Twitter) LinkedIn More Post navigation ಸೇನಾ ಹೆಲಿಕಾಪ್ಟರ್ ಹೊಡೆದುರುಳಿಸಿದ ಇರಾನ್!ಅಮೇರಿಕ ಪ್ರತಿ ದಾಳಿ ಕದನ ವಿರಾಮ ಒಪ್ಪಂದದ ನಡುವೆಯೂ ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲ್ ದಾಳಿ ಮುಂದುವರಿಕೆ!