ಮುಂದೆ ಆಗುವ ಮತ್ತಷ್ಟು ಬೆದರಿಕೆಯನ್ನುತಡೆಯುವ ನಿಟ್ಟಿನಲ್ಲಿ ದಕ್ಷಿಣ ಲೆಬನಾನ್ನಲ್ಲಿ ಕಾರ್ಯಾಚರಣೆಯನ್ನುಮುಂದುವೆರಿಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ. ಜೆರುಸಲೆಂ: ಇರಾನ್ ವಿರುದ್ಧ ಅಮೆರಿಕ ಶಾಂತಿ ಒಪ್ಪಂದ ಮಾಡಿಕೊಂಡಿದ್ದರೂ ಇಸ್ರೇಲ್ ರಕ್ಷಣಾ ಪಡೆ(IDF) ದಕ್ಷಿಣ ಲೆಬನಾನ್ನಲ್ಲಿದಾಳಿಯನ್ನು ಮುಂದುವರೆಸಿದೆ. ಹೆಜ್ಬುಲ್ಲಾ ದಾಳಿಗೆ ಪ್ರತಿಕ್ರಿಯೆಯಾಗಿ ತನ್ನ ದಾಳಿಯನ್ನು ಮುಂದುವರೆಸಿರುವುದಾಗಿಹೇಳಿದೆ. ಇತ್ತೀಚಿಗೆ ಹೆಜ್ಬುಲ್ಲಾ ನಡೆಸಿದ ದಾಳಿಯಲ್ಲಿ ಇಸ್ರೇಲಿನ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ. ಮುಂದೆ ಆಗುವ ಮತ್ತಷ್ಟು ಬೆದರಿಕೆಯನ್ನುತಡೆಯುವ ನಿಟ್ಟಿನಲ್ಲಿ ದಕ್ಷಿಣ ಲೆಬನಾನ್ನಲ್ಲಿ ಕಾರ್ಯಾಚರಣೆಯನ್ನು ಮುಂದುವೆರಿಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಯ ವಕ್ತಾರ ಬ್ರಿಗೇಡಿಯರ್ ಜನರಲ್ಎಫಿಡೆಫ್ರೀನ್ ಸಂದೇಶದಲ್ಲಿತಿಳಿಸಿದ್ದಾರೆ. ಹೆಜ್ಬೂಲಾ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಇಸ್ರೇಲ್ ಗ ಗಡಿಪ್ರದೇಶ ಹಾಗೂ ನಮ್ಮ ನಾಗರಿಕರ ಮೇಲೆ ದಾಳಿ ನಡೆಸುವ ಹೆಜ್ಬೂಲ್ಲಾದ ಗುರಿ ಹಾಗೆಯೇ ಇದೆ. ಇದೇ ಕಾರಣದಿಂದ ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ರಕ್ಷಣಾ ಪಡೆ ದಾಳಿ ಮುಂದುವರೆಸಿದೆ ಎಂದು ಅವರು ಹೇಳಿದ್ದಾರೆ. #Southern Lebanon#IDF #continue attack #ದಕ್ಷಿಣಲೆಬನಾನ್ #ಐಡಿಎಫ್ #ದಾಳಿ ಮುಂದುವರಿಕೆ Share via: Facebook X (Twitter) LinkedIn More Post navigation ಶಾಂತಿ ಒಪ್ಪಂದಕ್ಕೆ ಟ್ರಂಪ್- ಇರಾನ್ ಅಧ್ಯಕ್ಷರ ಸಹಿ,ಪಶ್ಚಿಮ ಏಷ್ಯಾ ಯುದ್ಧ ಅಂತ್ಯ! ತಕ್ಷಣದಿಂದಲೇ Hormuz ಜಲಸಂಧಿ ಓಪನ್..!