ಅರಣ್ಯ ಇಲಾಖೆಯ ಪ್ರಕಾರ, ಮೃತಪಟ್ಟ ನವಿಲುಗಳಿಂದ ಸಂಗ್ರಹಿಸಲಾದ ಮಾದರಿಗಳನ್ನು ಭೋಪಾಲ್ನಲ್ಲಿರುವ ICAR (National Institute of High Security Animal Diseases)ಕಳುಹಿಸಲಾಗಿತ್ತು. ಇದು H5N1 ಸಾವಿಗೆ ಕಾರಣ ಎಂದು ದೃಢಪಡಿಸಿದೆ. ತುಮಕೂರು: ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ಹಕ್ಕಿಜ್ವರ H5N1 ಸೋಂಕಿನಿಂದ 44 ನವಿಲುಗಳ ಸಾವನ್ನಪ್ಪಿವೆ ಎಂದು ಪ್ರಯೋಗಾಲಯದ ವರದಿಗಳು ದೃಢಪಡಿಸಿವೆ. ಏಪ್ರಿಲ್ 16 ರಂದು ಘಟನೆ ಮೊದಲಿಗೆ ವರದಿಯಾಗಿತ್ತು. ತದನಂತರ ಒಂದು ವಾರದ ಅವಧಿಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 44 ನವಿಲುಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದವು. ವ್ಯಾಪಕವಾದ ಕಾರ್ಯಾಚರಣೆ ಸಮಯದಲ್ಲಿ ಕೆಸರಮಾಡು, ಹಿರೇಹಳ್ಳಿ ಮತ್ತು ಗೂಳೂರು ಗ್ರಾಮ ಪಂಚಾಯತ್ಗಳ ಕೃಷಿ ಭೂಮಿಗಳಲ್ಲಿ ನವಿಲುಗಳು ಸಾವಿನ ಬಗ್ಗೆ ವರದಿಯಾಗಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಪ್ರಕಾರ, ಮೃತಪಟ್ಟ ನವಿಲುಗಳಿಂದ ಸಂಗ್ರಹಿಸಲಾದ ಮಾದರಿಗಳನ್ನು ಭೋಪಾಲ್ನಲ್ಲಿರುವ ICAR (National Institute of High Security Animal Diseases)ಕಳುಹಿಸಲಾಗಿತ್ತು. ಇದು H5N1 ಸಾವಿಗೆ ಕಾರಣ ಎಂದು ದೃಢಪಡಿಸಿದೆ. ಆದಾಗ್ಯೂ, ಏಪ್ರಿಲ್ 23 ರಿಂದ ತುಮಕೂರು ತಾಲ್ಲೂಕಿನ ಯಾವುದೇ ಭಾಗದಲ್ಲಿ ಹೊಸ ಸಾವುಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. #Tumakuru #peacocks #Death #H5n1 confirmed #ತುಮಕೂರು#ನವಿಲುಗಳು #ಸಾವು #ಹಕ್ಕಿಜ್ವರ Post navigation IPL 2026: ಕೆ.ಎಲ್. ರಾಹುಲ್ ಅಬ್ಬರ, ರಾಜಸ್ಥಾನ ವಿರುದ್ಧ ಡೆಲ್ಲಿಗೆ 7 ವಿಕೆಟ್ ಗೆಲುವು! ಸಿಎಂ ಬದಲಾವಣೆ ಚರ್ಚೆ ನಡುವೆ ಕುತೂಹಲ ಕೆರಳಿಸಿದ ಸಿಎಂ ಸಿದ್ದರಾಮಯ್ಯ-ಬಿ.ಕೆ ಹರಿಪ್ರಸಾದ್ ಮಾತುಕತೆ!