ಹೈದರಾಬಾದ್ ತಂಡ ತವರಿನಲ್ಲಿ ರಾಜಸ್ಥಾನದ ವಿರುದ್ಧ ಭರ್ಜರಿ 57 ರನ್ ಗಳ ಜಯ ದಾಖಲಿಸಿದೆ. ಹೈದರಾಬಾದ್: ಹೈದರಾಬಾದ್ ತಂಡ ತವರಿನಲ್ಲಿ ರಾಜಸ್ಥಾನದ ವಿರುದ್ಧ ಭರ್ಜರಿ 57 ರನ್ ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 216 ರನ್‌ಗಳಿಸಿತ್ತು. 217 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಐಪಿಎಲ್ ಇತಿಹಾಸದಲ್ಲೇ ಮೊದಲ ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡ ದಾಖಲೆ ಐಪಿಎಲ್‌ನ (IPL 2026) 21ನೇ ಪಂದ್ಯದಲ್ಲಿ ನಿರ್ಮಾಣವಾಗಿದೆ. ಸನ್ ರೈಸರ್ಸ್ ಹೈದರಾಬಾದ್ ಪರ ಪದಾರ್ಪಣೆ ಮಾಡಿದ ಪ್ರಫುಲ್ ಹಿಂಗೆ ಬೌಲಿಂಗ್ ನಲ್ಲಿ ಮೊದಲ ಓವರ್ ನಲ್ಲಿ ಮೂವರು ಬ್ಯಾಟರ್ ಗಳು ಡಕ್ ಔಟ್ ಆಗಿದ್ದು ಐಪಿಎಲ್ ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಟೂರ್ನಿಯಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ದಿಗ್ಗಜ ಬೌಲರ್‌ಗಳನ್ನೇ ನಡುಗಿಸಿದ್ದ ವೈಭವ್ ಸೂರ್ಯವಂಶಿ ತಾವೆದುರಿಸಿದ ಮೊದಲ ಎಸೆತದಲ್ಲೇ ಸಲೀಲ್ ಅರೋರಾಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಧ್ರುವ್ ಜುರೆಲ್ ಖಾತೆ ತೆರೆಯದೇ ಪ್ರಫುಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಕೊನೆಯ ಎಸೆತದಲ್ಲಿ ಲುವಾನ್ ಡಿ ಪ್ರೆಟೋರಿಯಸ್ ಕೂಡ ರನ್ ಗಳಿಸದೇ ನಿತೀಶ್ ಕುಮಾರ್ ರೆಡ್ಡಿಗೆ ಕ್ಯಾಚ್ ನೀಡಿ ಪೆವಿಲಿಯನ್ ಗೆ ನಡೆದರು. 19 ವರ್ಷಗಳಲ್ಲಿ ಯಾವುದೇ ಬೌಲರ್ ಮೊದಲ ಓವರ್‌ನಲ್ಲಿ 3 ವಿಕೆಟ್ ಪಡೆದಿರಲಿಲ್ಲ. ಆದರೆ 24 ವರ್ಷದ ಪ್ರಫುಲ್ ಹಿಂಗೆ ಕೇವಲ 1 ರನ್ ನೀಡಿ 3 ವಿಕೆಟ್ ಪಡೆದು ಚರಿತ್ರೆ ಸೃಷ್ಟಿಸಿದ್ದಾರೆ. Share via: Facebook X (Twitter) LinkedIn More Post navigation IPL 2026: ವೈಭವ್ ಸೂರ್ಯವಂಶಿ ಅಬ್ಬರ; RCB ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್! IPL 2026: 8 ವಿಕೆಟ್ ಗಳಿಂದ ಚೆನ್ನೈ ಸೋಲಿಸಿದ ಗುಜರಾತ್!