ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ


ಮೇ 15 ರಂದು ಆರಂಭವಾದ ಈ ಸರಣಿ ಏರಿಕೆಯಿಂದ ಒಟ್ಟಾರೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸುಮಾರು ರೂ.7.5 ರಷ್ಟು ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಹೊಡೆತ ಮೇಲೆ ಹೊಡೆತ ಬೀಳುತ್ತಿದೆ. 

ನವದೆಹಲಿ:  ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಏರಿಕೆಯಾಗಿದೆ. ಸೋಮವಾರ ಪೆಟ್ರೋಲ್ ದರವನ್ನು  ಲೀಟರ್‌ಗೆ  ರೂ. 2.61 ಹಾಗೂ ಡೀಸೆಲ್ ದರವನ್ನು ರೂ. 2.71 ಹೆಚ್ಚಿಸಲಾಗಿದೆ. ಕಳೆದ ಎರಡು ವಾರಗಳಲ್ಲಿ ನಾಲ್ಕನೇ ಬಾರಿ ನಡೆದ ದರ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಂತರರಾಷ್ಟ್ರೀಯ ಬೆಲೆಗಳ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತಲೇ ಇವೆ.

ಮೇ 15 ರಂದು ಆರಂಭವಾದ ಈ ಸರಣಿ ಏರಿಕೆಯಿಂದ ಒಟ್ಟಾರೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸುಮಾರು ರೂ.7.5 ರಷ್ಟು ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಹೊಡೆತ ಮೇಲೆ ಹೊಡೆತ ಬೀಳುತ್ತಿದೆ. 

ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 2.61 ರೂ.ಗಳಷ್ಟು ಹೆಚ್ಚಿಸಲಾಗಿದ್ದು, 99.51 ರೂ.ಗಳಿಂದ 102.12 ರೂ.ಗಳಿಗೆ ತಲುಪಿದೆ. ಡೀಸೆಲ್ ದರವನ್ನು ಲೀಟರ್‌ಗೆ 2.71 ರೂ.ಗಳಷ್ಟು ಹೆಚ್ಚಿಸಲಾಗಿದ್ದು, 92.49 ರೂ.ಗಳಿಂದ 95.20 ರೂ.ಗಳಿಗೆ ತಲುಪಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ಹೆಚ್ಚುತ್ತಿರುವ ಜಾಗತಿಕ ಕಚ್ಚಾ ತೈಲ ಬೆಲೆಗಳು ಮತ್ತು  ರೂಪಾಯಿ ಮೌಲ್ಯ ದುರ್ಬಲತೆ ನಡುವೆ ಮಧ್ಯೆ ಈಗ ಬೆಲೆ ಏರಿಕೆಯಾಗಿದೆ. ಇದು ತೈಲ ಮಾರುಕಟ್ಟೆ ಕಂಪನಿಗಳ ಆಮದು ವೆಚ್ಚಗಳ ಮೇಲೆ ಒತ್ತಡವನ್ನು ಹೆಚ್ಚಿಸಿದೆ.

#Newdelhi #petrol #diesel #prices raised #ನವದೆಹಲಿ#ಪೆಟ್ರೋಲ್ #ಡೀಸೆಲ್ #ಬೆಲೆ ಏರಿಕೆ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link