2022ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್ ‘ಕೆಜಿಎಫ್: ಚಾಪ್ಟರ್ 2’ ಬಳಿಕ ಸುಮಾರು ನಾಲ್ಕು ವರ್ಷಗಳ ನಂತರ ಯಶ್ ಅಭಿನಯದ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷ. ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic: A Fairy Tale for Grown-Ups) ಸಿನಿಮಾದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಭಿನ್ನ ಗೆಟಪ್‌ಗಳಲ್ಲಿ ಮಿಂಚಿದ್ದಾರೆ. 2022ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್ ‘ಕೆಜಿಎಫ್: ಚಾಪ್ಟರ್ 2’ ಬಳಿಕ ಸುಮಾರು ನಾಲ್ಕು ವರ್ಷಗಳ ನಂತರ ಯಶ್ ಅಭಿನಯದ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷ. ಟಾಕ್ಸಿಕ್’ ಚಿತ್ರದಲ್ಲಿ ನಟ ಯಶ್ ‘ರಾಯ’ (Raya) ಮತ್ತು ‘ಟಿಕೆಟ್’ (Ticket) ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಯ ಪಾತ್ರವು ಗಡ್ಡ, ಉದ್ದನೆಯ ಜುಟ್ಟು ಹೊಂದಿದ ರಗಡ್ ಮತ್ತು ಗ್ಯಾಂಗ್‌ಸ್ಟರ್ ಲುಕ್‌ನಲ್ಲಿದ್ದರೆ, ಟಿಕೆಟ್ ಪಾತ್ರವು ಅತ್ಯಂತ ಕಿರಿಯ ವಯಸ್ಸಿನ, ಸಂಪೂರ್ಣ ಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದೆ. ಈ ಎರಡು ಪಾತ್ರಗಳ ನಡುವಿನ ಸಂಬಂಧ ಹಾಗೂ ಕಥೆಯ ಟ್ವಿಸ್ಟ್‌ಗಳನ್ನು ಟ್ರೇಲರ್‌ನಲ್ಲಿ ರಹಸ್ಯವಾಗಿಡಲಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಬೆಳೆಯುವಂತೆ ಮಾಡಿದೆ. ನಯನತಾರಾ ‘ಗಂಗಾ’ ಪಾತ್ರದಲ್ಲಿ, ಕಿಯಾರಾ ಅಡ್ವಾಣಿ ‘ನಟಾಶಾ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಲೈಯರ್ಸ್ ಡೈಸ್’ ಮತ್ತು ‘ಮೂತೋನ್’ ಖ್ಯಾತಿಯ ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಯಶ್ ಜೊತೆಗೂಡಿ ಚಿತ್ರಕಥೆ ಬರೆದಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ (KVN Productions) ಹಾಗೂ ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ರಾಜೀವ್ ರವಿ ಛಾಯಾಗ್ರಹಣ ಮಾಡಿದ್ದು, ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಆಗಸ್ಟ್ 26ಕ್ಕೆ ಪ್ರಪಂಚದಾದ್ಯಂತ ಬಿಡುಗಡೆ: ‘ಟಾಕ್ಸಿಕ್’ ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣಗೊಂಡಿದ್ದು, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. #Toxic #Yash #trailer out #action movie #Geetu Mohandas #ಟಾಕ್ಸಿಕ್ #ಯಶ್ #ಟ್ರೈಲರ್ ಬಿಡುಗಡೆ#ಆಕ್ಷನ್ ಸಿನಿಮಾ#ಗೀತುಮೋಹನ್ ದಾಸ್ Share via: Facebook X (Twitter) LinkedIn More Post navigation ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಶಾಂತಿಕ್ರಾಂತಿ’ ರಿ ರಿಲೀಸ್ ಗೆ ಅಭಿಯಾನ ಶುರು!